Nirathanka
  • HOME
    • Team
  • POSH
  • Online Groups
  • Books
  • BLOG
  • Contact Us

ಕೈಗಾರಿಕೆಗಳಲ್ಲಿ ಕನ್ನಡ

9/17/2017

0 Comments

 
ಪ್ರತಿ ನವೆಂಬರ್‍ನಲ್ಲಿ ಕನ್ನಡತನ ಜಾಗೃತವಾಗುವಂತೆ ಈ ಸಲವೂ ಅನೇಕ ಕೈಗಾರಿಕೆಗಳಲ್ಲಿ ಸಂಬಂಧಿಸಿದಂತೆ ಕೆಳಗಿನ ವಿಷಯಗಳನ್ನು ಗಮನಿಸುವುದು ಸೂಕ್ತ.​
  1. ಕನ್ನಡೀಕರಣ, ಕನ್ನಡಮಯವಾಗಬೇಕಾದರೆ ಪೂರಕವಾದ ಸಾಹಿತ್ಯವನ್ನು ಒದಗಿಸುವುದು ಸೂಕ್ತ. ಅನೇಕ ಬಾರಿ ಶಬ್ದಗಳ ಅಜ್ಞಾನ, ಅಭಾವದಿಂದ ಬರೆಯಲು ತಡಕಾಡಬೇಕಾಗಬಹುದು. ಈ ದಿಶೆಯಲ್ಲಿ ಉತ್ಪಾದನಾ ರಂಗಗಳಿಗೆ ಬೇಕಾದಂತೆ.
    ​ನಿಯೋಜನಾ ಪತ್ರಗಳು (appointment orders) Induction manual, ರೀತಿ ನಿಯಮಗಳ ಕೈಪಿಡಿ, ಸೂಚನೆಗಳ ಕೈಪಿಡಿ, ಪತ್ರಗಳು ಅನೇಕಾನೇಕ ವಿವಿಧ ರೀತಿಯ ನಮೂನೆ/ಮಾದರಿಗಳನ್ನು ತಯಾರಿಸಿ ಎಲ್ಲಾ ಉದ್ದಿಮೆಗಳಿಗೆ ತಕ್ಷಣ ಕೈಗೆಟಕುವಂತೆ ಇರಬೇಕು.
  2. ಎಲ್ಲಾ ಉದ್ದಿಮೆ ಐಟಿ, ಬಿಟಿ ಸೇರಿದಂತೆ ಕಂಪನಿಯ ಆವರಣ, ಸ್ವಾಗತಾಕಾರರ desk ತಲುಪಿದಂತೆ vision (ದೃಷ್ಠಿ) mission (ಗುರಿ) objectives (ಧ್ಯೇಯೋದ್ದೇಶಗಳು) ಗುಣನೀತಿ ಇತ್ಯಾದಿಗಳು ಇಂಗ್ಲೀಷ್ ಜೊತೆ ಕನ್ನಡದಲ್ಲಿ ಪ್ರದರ್ಶಿಸಿರಬೇಕು. ಸಂಸ್ಥೆಯ ಎಲ್ಲಾ sign boards (ಸಂಜ್ಞಾ ಬೋರ್ಡುಗಳು) ಇಂಗ್ಲೀಷ್ ಜೊತೆ ಕನ್ನಡದಲ್ಲಿರಬೇಕು.
  3. ಕಂಪನಿಯ ವ್ಯವಹಾರಗಳಲ್ಲಿ ಎಂದರೆ ಗುತ್ತಿಗೆ ಕಾರ್ಮಿಕ, ಸೆಕ್ಯುರಿಟಿ, ಕ್ಯಾಂಟೀನ್, ಸ್ಕ್ರಾಪ್‍, ವಾರ್ಷಿಕ ರಿಪೇರಿ ಗುತ್ತಿಗೆ, ವಾರ್ಷಿಕ ವರದಿಯ ಕೆಲ ನಡವಳಿಕೆಗಳ ಪತ್ರಗಳು ರೆಡಿಯಾಗಿ ಸಿಗುವಂತಿದ್ದರೆ ಬಳಸುವ ಇಚ್ಛೆಯುಳ್ಳವರಿಗೆ ಸುಲಭ.
  4. ಕಾರ್ಮಿಕ ಕಾಯಿದೆಗಳ ಸಾರಾಂಶ (abstracts) ಎಲ್ಲವುಗಳು ಇಂಗ್ಲೀಷ್ ಜೊತೆ ಕನ್ನಡದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಂಸ್ಥೆಯಲ್ಲಿ ಕೈಗಾರಿಕಾ ನಿಯೋಜನಾ (ಸ್ಥಾಯಿ ಆಜ್ಞೆ) ಕನ್ನಡದಲ್ಲಿ ಕಡ್ಡಾಯವಾಗಿಸಿ ಎಲ್ಲರಿಗೂ ಪ್ರಚುರಪಡಿಸುವಂತಿರಬೇಕು. ಯಾವುದೇ ವಿಷಯ ಮಾತೃಭಾಷೆಯಲ್ಲಿ ಅತ್ಯುತ್ತಮವಾಗಿ ಮನನವಾಗುವುದು. ಅನೇಕರಿಗೆ ನೀಡಬೇಕಾದ ಪತ್ರಗಳು ಎಂದರೆ ದೋಷಾರೋಪಣ ಪಟ್ಟಿ, ಹೊಗಳಿಕೆಯ ಪತ್ರ, ಒಪ್ಪಂದಗಳು ಕೆಲವೊಂದು ಅವಶ್ಯಕ ತಾಂತ್ರಿಕ ವಿವರಗಳು ಕನ್ನಡದಲ್ಲಿ ದೊರಕುವಂತಿರಬೇಕು.
  5. ಕನ್ನಡ ರಾಜ್ಯೋತ್ಸವವನ್ನು ಉದ್ದಿಮೆಗಳಲ್ಲಿ ಆಚರಿಸುವಾಗ ಇತರ ಭಾಷಿಕ ಸೋದರರ ಕನ್ನಡ ಜ್ಞಾನವೃದ್ಧಿಗೆ, ಅರಿವಿಗೆ, ಬಳಕೆಗೆ, ಬೆಳವಣಿಗೆಗೆ, ಅವರನ್ನು ಹುರಿದುಂಬಿಸಿ, ಪ್ರೋತ್ಸಾಯಿಸಿ ಅವರ ಅಭಿರುಚಿಯನ್ನು ಗುರುತಿಸಿ, ಬಹುಮಾನ ನೀಡುವ ಮೂಲಕ ಅವರಿಗೆ ಕನ್ನಡ ಭಾಷೆಯ ಬಗೆಗೆ ಆತ್ಮವಿಶ್ವಾಸ ತುಂಬಬೇಕು. ಅವರ ಜತೆ ಸಂವಹಿಸುವಾಗ ಸಾಧ್ಯವಾದ ಮಟ್ಟಿಗೆ ಕನ್ನಡದಲ್ಲಿ ಮಾತನಾಡುವ ಪ್ರಯತ್ನ ಮಾಡಬೇಕು. ಸೂಚನಾ ಫಲಕದ ಹತ್ತಿರ ದಿನವೂ ಒಂದೊಂದು ಕನ್ನಡ ಶಬ್ದವನ್ನು ಇಂಗ್ಲೀಷ್ ಜತೆ ಬರೆದು ಅವರ ಶಬ್ದಜ್ಞಾನ, ಶಬ್ದ ಸಂಪತ್ತು ಹೆಚ್ಚಿಸಬೇಕು.
  6. ವಾಚನಾಲಯ ಮನರಂಜನಾ ಕೇಂದ್ರಗಳನ್ನು ಹೊಂದಿದ ಸಂಸ್ಥೆಗಳಲ್ಲಿ ಕನ್ನಡ ಪುಸ್ತಕಗಳು, ವೃತ್ತಪತ್ರಿಕೆ ಇರಿಸಿ ಓದಿಗೆ ಪ್ರೋತ್ಸಾಹಿಸಬೇಕು ಇದೇ ವೇಳೆಯಲ್ಲಿ ಇತರ ಭಾಷಿಕ ನೌಕರರಿಗೆ ಕನ್ನಡದಲ್ಲಿ ಕವನ, ಹಾಡಿನಂತಹ ಹಲವಾರು ಸ್ಪರ್ಧೆಗಳನ್ನಿಟ್ಟು ಬಹುಮಾನ ನೀಡಿದಾಗ ಅವರು ಉತ್ತೇಜನಗೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ.
  7. ಸಂಸ್ಥೆಯ ನಾಮಫಲಕ ಕನ್ನಡದಲ್ಲಿ ಇರುವಂತೆ, ಗಣಕಯಂತ್ರಗಳಲ್ಲಿ ಕನ್ನಡ ಸಾಫ್ಟ್‍ವೇರ್ ಕನ್ನಡ ಇಂಟರ್‍ನೆಟ್ (ಮಿಂಚಂಚೆ) ಒದಗಿಸಲು ಮರೆಯಬಾರದು. ಅವಶ್ಯಕತೆ ಹಾಗೂ ಬೇಡಿಕೆಗೆ ತಕ್ಕಂತೆ ಜಾಲತಾಣಗಳ (ವೆಬ್‍ಸೈಟ್‍) ನಿರ್ಮಾಣ.
  8. ಗುಣಮಾಸ, ಉತ್ಪಾದಕತಾ ದಿನ, ಸುರಕ್ಷತಾ ದಿನ, ವಾರ್ಷಿಕ ದಿನ ಇತರ ದಿನಗಳಲ್ಲಿ ನೌಕರರಿಗೆ ಲೇಖನ, ವ್ಯಂಗ್ಯಚಿತ್ರ, ಸ್ವರಚಿತ ಕವನ ಹಾಗೂ ಆಯಾಯ ದಿನಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹಿಸಿ, ಅವರು ಬರೆದ ಕನ್ನಡ ಲೇಖನ, ಕವನಗಳನ್ನು ಪ್ರೋತ್ಸಾಹಿಸಿ, ಎಲ್ಲರಿಗೂ ಪ್ರತಿ ಒದಗಿಸಿದ್ದಲ್ಲಿ ಗೃಹಸಂಚಿಕೆಯಲ್ಲಿ ಪ್ರಕಟಿಸಿದಲ್ಲಿ ಸಂಬಂಧಿತ ಸಾಹಿತ್ಯ ನಿರ್ಮಾಣವಾದಂತೆಯೇ. ಇದರಲ್ಲಿ ಸಂಸ್ಥೆಯ ಹಿತವೂ ಅಡಗಿದೆ.
  9. ಅದೂ ಅಲ್ಲದೆ ಸಂಸ್ಥೆಗಳಲ್ಲಿ ನಿರಂತರವಾಗಿ ಸಂಬಂಧಿಸಿದ ವಿಷಯಗಳಿಗೆ ಕನ್ನಡದಲ್ಲಿ ಬೋಧನೆ, ತರಬೇತಿ, ಶಿಕ್ಷಣ ಅವಶ್ಯಕವಾಗಿ ಮೇಲಿಂದ ಮೇಲೆ ನಡೆಸುತ್ತಿರಬೇಕು. ಬರೀ ವಾದ್ಯಗೋಷ್ಠಿ ನಡೆಸಿ ಕನ್ನಡ ಮೆರೆಯುವುದಕ್ಕಿಂತ ಹಾಗೂ ತದನಂತರ ಮರೆಯುವುದಕ್ಕಿಂತ ಮೇಲಿನ ವಿಷಯಗಳನ್ನು ಅನುಸರಿಸಿ ಪಾಲಿಸಿದಲ್ಲಿ ಕನ್ನಡದ ಏಳ್ಗೆ ಬೆಳವಣಿಗೆ ಹಾಗೂ ಅಭಿವೃದ್ಧಿ ಆಗುವುದರಲ್ಲಿ ಸಂಶಯವಿಲ್ಲ.
  10. ಸಂಘಗಳಿರುವ ಸಂಸ್ಥೆಗಳಲ್ಲಿ ಆಡಳಿತ ಮತ್ತು ಸಂಘಗಳ ಮಧ್ಯೆ ನಡೆದ ಒಪ್ಪಂದಗಳು ಎಂದರೆ ಒಡಂಬಡಿಕೆಗಳು ಕನ್ನಡದಲ್ಲಿ ಮಾಡಿದಾಗ ಎಲ್ಲರಿಗೂ ತಿಳಿಯುವುದು.
  11. ಸಂಸ್ಥೆಯಲ್ಲಿ ನ್ಯೂಸ್ ಲೆಟರ, ಹೌಸ ಮ್ಯಾಗಝಿನ (ಆಂತರಿಕ ನಿಯತಕಾಲಿಕೆ) ಇದ್ದರೆ ಅದರಲ್ಲಿ ಕನ್ನಡದ ವಿಭಾಗ/ಅಂಕಣ ಸೇರಿಸುವುದು.
  12. ಆವರಣದಲ್ಲಿ ಎಟಿಎಂ ಇದ್ದಲ್ಲಿ ಅದರಲ್ಲೂ ಕೂಡಾ ಕನ್ನಡದ ತಂತ್ರಾಂಶ ಸೇರಿಸಲು ಸಂಬಂಧಿಸಿದ ಬ್ಯಾಂಕಿಗೆ ಒತ್ತಾಯಿಸುವುದು ಹಾಗೂ ಅದನ್ನು ಮೇಲಿಂದ ಮೇಲೆ ಉಪಯೋಗಿಸುವುದು.
  13. ಕರ್ನಾಟಕದ ಎಲ್ಲರು ತಮ್ಮ ಸ್ವಂತದ ವಿಮೆ ಪಾಲಿಸಿ, ವಾಹನದ, ಮೇಡಿಕ್ಲೇಮ್, ಸಮೂಹ ಅಪಘಾತ ವಿಮೆ ಯೋಜನೆ, ಹೆಲ್ತ ಪಾಲಿಸಿಗಳ ನಿಯಮ ಸೂಚನೆ ವಿವರಗಳನ್ನು, ನಿಬಂಧನೆ ಮತ್ತು ಷರತ್ತುಗಳ ವಿವರಗಳನ್ನು, ಬರವಣಿಗೆಗಳನ್ನು, ದಾಖಲೆಗಳನ್ನು ಕನ್ನಡದಲ್ಲಿಯೆ ಕೊಡಿ, ನೀಡಿ ಎಂದು ಬೇಡಿ ಒತ್ತಾಯಿಸುವುದು.
  14. ನಮ್ಮೊಂದಿಗೆ ಸಂಸ್ಥೆಯಲ್ಲಿ ಇರುವ ಇತರ ಭಾಷಿಕ ಸಹೋದ್ಯೋಗಿ, ಅಧಿಕಾರಿಗಳಿಗೆ, ನೌಕರರಿಗೆ, ಬೇರೆ ರಾಜ್ಯದ ಕಾರ್ಮಿಕರಿಗೆ ಕನ್ನಡ ಕಲಿಕೆಗೆ, ಮಾತನಾಡುವಿಕೆಗೆ ಕನಿಷ್ಠ ಜ್ಞಾನದ ಬಗ್ಗೆ ಅರಿವು ಮೂಡಿಸುವುದು ಕಲಿಸುವುದು ನಡೆಯಬೇಕು.
  15. ಹೀಗೆಂದ ಮಾತ್ರಕ್ಕೆ ಬೇರೆ ಭಾಷೆಗಳನ್ನು ಹೀಯಾಳಿಸುವುದು ತಿರಸ್ಕರಿಸುವುದು ಸಲ್ಲ. ಆದರೆ ಸ್ಥಳೀಯ, ಜನರ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ಅಸಡ್ಡೆ ಅಗೌರವ ಇರಕೂಡದು. ಒಟ್ಟಿನಲ್ಲಿ ಕನ್ನಡ ಬಿಡದೆ ಅಭಿಮಾನದಿಂದ, ಸ್ನೇಹದ ಮುಕ್ತ ವಾತಾವರಣ ಕೈಗಾರಿಕೆಗಳಲ್ಲಿ ಮೂಡಿಸಿ ಬೆಳೆಸಿ ಪೋಷಿಸಿದಾಗ ಕನ್ನಡ ಭಾಷೆ ನೆಲೆಸಿ ಎಲ್ಲರ ಸ್ವಯಂ ಪ್ರೀತಿಗೆ ಒಳಗಾಗುವುದರಲ್ಲಿ ಸಂಶಯ ಇಲ್ಲ.
(ಲೇಖಕರು ಮೇಲಿನ ವಿಷಯಗಳಿಗೆ ಅನೇಕ ವರ್ಷಗಳಿಂದ ಪೂರಕ ಸಾಹಿತ್ಯ ನಿರ್ಮಿಸಿ ಭಾಷಾಂತರ ಮಾಡಿ ಲೇಖನಗಳನ್ನು, ಪುಸ್ತಕಗಳನ್ನು ಒದಗಿಸಿದ್ದಾರೆ. ರಾಜ್ಯೋತ್ಸವ ಆಚರಿಸುವಾಗ ಇವುಗಳನ್ನು ಗಣನೆಗೆ ತೆಗೆದುಕೊಂಡು ಪುರಸ್ಕರಿಸಿ, ಪ್ರಚುರ ಪಡಿಸಿ, ಪ್ರದರ್ಶಿಸಿದರೆ ಅನೇಕರಿಗೆ/ಕೈಗಾರಿಕಾ ರಂಗಕ್ಕೆ ಕನ್ನಡ ಸುಲಭವಾಗಬಹುದು.)
 
ರಾಮ್‍ ಕೆ. ನವರತ್ನ
ಬೆಂಗಳೂರು
ಎಚ್.ಆರ್. ರಿಸೋನನ್ಸ್
0 Comments

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    Picture

    Inviting articles

    Inviting meaningful articles on HR and Labour Law to publish in our website 

    Submit Your article
    Human Resources And Labour Law Classes

    RSS Feed


Powered by Create your own unique website with customizable templates.
  • HOME
    • Team
  • POSH
  • Online Groups
  • Books
  • BLOG
  • Contact Us