ಕಿರಣ್ ಉರ್ವಾ ಮುನ್ನುಡಿ ಈ ಸಂಚಿಕೆಯು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಯುವುದಕ್ಕೆ ಸ್ಪಷ್ಟವಾದ ದಾರಿಯಾಗಿರುತ್ತದೆ. ಲೇಖಕರು ಶ್ರದ್ಧೆಯಿಂದ ಓದುಗರಿಗೆ ಸ್ವ-ಸಹಾಯ ಸಂಘದಿಂದ ಹಿಡಿದು ಕಿರು ಸಾಲ ಯೋಜನೆಯ ತನಕ ಸಂಬಂಧಿಸಿದ 23 ಅಧ್ಯಾಯಗಳನ್ನು ತೆರೆದಿಟ್ಟಿದ್ದಾರೆ ಹಾಗೂ ಮಹಿಳೆಯರ ವಿವಿಧ ಸಣ್ಣ ಹಾಗೂ ಮಧ್ಯಮ ಗಾತ್ರದ ಸಂಘಟನೆಯನ್ನು ರಚಿಸಲು ಸಹಕಾರಿಯಾಗಿರುತ್ತದೆ. ಸ್ವ-ಸಹಾಯ ಸಂಘ ರಚನೆಗೊಳ್ಳುವಲ್ಲಿ ಮಹಿಳೆಯರ ಹಿಂಜರಿಯುವಿಕೆ ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ವೈಫಲ್ಯತೆಯ ವಾತಾವರಣ ಇದ್ದಾಗ ಸಾಮಾಜಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ವ-ಸಹಾಯ ಸಂಘಗಳ ಕಾರ್ಯ ಶ್ಲಾಘನೆ, ಜನಸಾಮಾನ್ಯರ ತಾತ್ಸಾರ ಮತ್ತು ಅವಗಣನೆಯಿಂದಾಗಿ ಸರಕಾರದಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಸಾರ್ವಜನಿಕ ಹಾಗೂ ಸಮುದಾಯ ವಿಶಾಲ ಮನೋಭಾವನೆ ಹಾಗೂ ಜಾಗೃತಿಯನ್ನು ಕಂಡು ಹುಡುಕಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಮಹಿಳೆಯರು ಮುಂದೆ ಬರುತ್ತಿರುವುದು ಬಹಳ ಆಶಾದಾಯಕ ವಿಚಾರ. ಮುಂಬರುವ ದಿನಗಳಲ್ಲಿ ಈ ಲೇಖನದ ಮೂಲಕ ಫಲಭರಿತ ಹಾಗೂ ಸಂಪತ್ಭರಿತ ಮಾಹಿತಿಗಳಖನ್ನು ಹಾಗೂ ಜ್ಞಾನವನ್ನು ಪಸರಿಸುವ ಮೂಲಕ ಪ್ರಾರಂಭೋತ್ಸವವನ್ನೂ ಆಚರಿಸಲು ಸಹಕಾರಿಯಾಗಿರುತ್ತದೆ ಎಂಬುದು ನನ್ನ ಪ್ರಾಮಾಣಿಕ ಆಶಯ. ಬಹಳ ಹೆಮ್ಮೆಯ ವಿಚಾರವೆಂದರೆ ಈ ಸಂಚಿಕೆಯ ಲೇಖಕರಾದ ಶ್ರೀ ಕಿರಣ್ ರವರು ನಮ್ಮ ರೋಶನಿ ನಿಲಯದ ಸಮಾಜ ಸೇವಾ ಸ್ನಾತಕೋತ್ತರ ಪದವೀಧರರು. ಮುಂದಿನ ದಿನಗಳಲ್ಲಿ ಕಿರಣ್ ರವರ ಮುಖಾಂತರ ಇನ್ನೂ ಹೆಚ್ಚಿನ ಕಾರ್ಯಗಳು ಉನ್ನತ ಮಟ್ಟದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳು ಬೆಳಕಿಗೆ ಬರುವಂತಾಗಲಿ. ಈ ನಿಟ್ಟಿನಲ್ಲಿ ಕಿರಣ್ ರವರಿಗೆ ಸದಾ ದೇವರ ಆಶೀರ್ವಾದ ನಿಮಗಿರಲಿ ಹಾಗೂ ಯಶಸ್ಸು ನಿಮ್ಮದಾಗಿರಲಿ ಎಂಬುದು ನನ್ನ ಹಾರೈಕೆ. ಡಾ|| ಒಲಿಂಡ ಪಿರೇರ ಸ್ಥಾಪಕ ಪ್ರಾಂಶುಪಾಲರು, ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್, ರೋಶನಿ ನಿಲಯ, ಮಂಗಳೂರು ಅನುಕ್ರಮಣಿಕೆ
0 Comments
Your comment will be posted after it is approved.
Leave a Reply. |
Categories
All
Inviting articlesInviting meaningful articles on HR and Labour Law to publish in our website |