Nirathanka
  • HOME
    • Team
  • POSH
  • Online Groups
  • Books
  • BLOG
  • Contact Us

ಉದ್ಯೋಗದ ಕರಾರನ್ನು ಕಾನೂನಿನಲ್ಲಿ ಜಾರಿಗೆ ತರುವುದು : ಪ್ರಕರಣದ ಅಧ್ಯಯನ

12/6/2017

0 Comments

 
Picture
ಕೆ.ವಿಠ್ಠಲ್ ರಾವ್
ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಟ್ ಅಂಡ್ ಲೀಗಲ್ ಅಡ್ವೈಸರ್

ಶ್ರೀ ಖಾಡಿಲ್ಕರ್, ಎಲ್ಲರಿಗೂ ನಮಸ್ಥಾರ.  ಸಂಸ್ಥೆಯು ತೆಗೆದುಕೊಳ್ಳಲು ನಿರ್ಧಸಿರುವ ಒಂದು ಪ್ರಮುಖ ಯೋಜನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ.  ನಿಮಗೆಲ್ಲಾ ತಿಳಿದಿರುವಂತೆ ಜರ್ಮನಿಯ ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ, ಏರ್‍ಕ್ರಾಫ್ಟ್‍ನ ಟ್ರಾನ್ಸ್‍ಮಿಷನ್ ಬಿಡಿಭಾಗಗಳನ್ನು ಉತ್ಪಾದಿಸಲು ಮತ್ತು ಸರಬರಾಜು ಮಾಡುವ ಬಗ್ಗೆ ಬೆಕ್ಸ್‍ಟೀರ್‍ನೊಂದಿಗೆ ಒಂದು ಕರಾರಿಗೆ ಸಹಿ ಮಾಡಿರುತ್ತೇನೆ. ಆ ಬಿಡಿಭಾಗವು ನವೀನ ತಾಂತ್ರಿಕತೆಯೊಂದಿಗೆ ಅತ್ಯಂತ ಕ್ಲಿಷ್ಟಕರವಾದದ್ದಾಗಿರುತ್ತದೆ.   ನಮ್ಮ ಸಂಸ್ಥೆಯು ಅಂತಹ ಬಿಡಿಭಾಗವನ್ನು ಉತ್ಪಾದಿಸಿ ರಫ್ತು ಮಾಡುವ ಮೊದಲನೇ ಸಂಸ್ಥೆಯಾಗಿರುತ್ತದೆ.  ಅಂದಾಜಿನ ಪ್ರಕಾರ, ನಮಗೆ ಬೇಡಿಕೆ ಆದೇಶ ಬಂದಲ್ಲಿ, ನಮ್ಮ ಉತ್ಪಾದನಾ ಸಾಮರ್ಥ್ಯದ ಬಳಕೆಯು ಶೇಕಡ 85ರಷ್ಟಕ್ಕೆ ತಲುಪಬಹುದು ಮತ್ತು ಲಾಭಾಂಶವೂ ಸಹ ಉತ್ತಮವಾಗಿರುತ್ತದೆ.  ಇದೊಂದು ಒಳ್ಳೆಯ ವ್ಯವಹಾರದ ಸವಾಲಾಗಿರುತ್ತದೆ ಮತ್ತು ಸಂಸ್ಥೆಯು ಬೆಕ್ಸ್‍ಟೀರ್‍ನೊಂದಿಗೆ ಈಗಾಗಲೇ ಕರಾರಿಗೆ ಸಹಿಮಾಡಿರುವ ಬಗ್ಗೆ ತಿಳಿಸಲು ನಾನು ಹರ್ಷಿಸುತ್ತೇನೆ.  
ಬೆಕ್ಸ್‍ಟೀರ್‍ ನಮ್ಮ ಇಂಜಿನಿಯರುಗಳಿಗೆ ಅವರ ನವೀನ ತಾಂತ್ರಿಕತೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ. ಅಳವಡಿಸಬೇಕಾದ ಹೆಚ್ಚುವರಿ ಯಂತ್ರಗಳ ಅಗತ್ಯತೆಯ ವಿವರಗಳ ಬಗ್ಗೆ ಅಂದಾಜು ಮಾಡಲು ಹಾಗೂ ನಮ್ಮ ನಕ್ಷೆಯನ್ನು ಪುನರ್ಮಾಡು ಮಾಡುವ ಇತ್ಯಾದಿ ಅಗತ್ಯತೆಯ ಬಗ್ಗೆ ನಾನು ನಮ್ಮ ಯೋಜನಾ ತಂಡದೊಂದಿಗೆ ಒಂದು ಸಭೆಯನ್ನು ಆಯೋಜಿಸುತ್ತೇನೆ. ಶ್ರೀ ಸೆಕ್ಸೇನ, ಸೂಕ್ತ ವ್ಯವಸ್ಥಾಪಕರುಗಳನ್ನು ಗುರುತಿಸುವ ಮತ್ತು ಆಯ್ಕೆ ಮಾಡುವ ಜವಾಬ್ದಾರಿ ನಿಮ್ಮದಾಗಿರುತ್ತದೆ ಮತ್ತು ಅವರುಗಳು ಇಂಜಿಯರಿಂಗ್‍ನಲ್ಲಿ ಉತ್ಕೃಷ್ಟರಾಗಿರಬೇಕೆಂಬ ಬಗ್ಗೆ ಒತ್ತಿ ಹೇಳುವ ಅಗತ್ಯತೆಯಿಲ್ಲ. ಶ್ರೀ ರಮೇಶ್‍ರವರು ಶ್ರೀಮತಿ ವೀಣಾರವರೊಂದಿಗೆ ಮುಂದಿನ 5 ದಿನಗಳೊಳಗೆ ವಿಷಯದ ಬಗ್ಗೆ ಒಂದು ಪ್ರಸ್ತುತಿಯನ್ನು ಸಿದ್ಧಪಡಿಸಬೇಕು. ಅವರೊಂದಿಗಿನ ಕರಾರನ್ನು ಕಾರ್ಯರೂಪಕ್ಕೆ ತರುವುದೂ ಸೇರಿದಂತೆ ನೀವೆಲ್ಲರೂ ಒಂದು ಪ್ರಸ್ತಾವನೆಯನ್ನು ನೀಡಬೇಕೆಂಬುದು ನನ್ನ ಆಶಯ.  ನಾವೆಲ್ಲರೂ ಜರ್ಮನಿಗೆ ಪ್ರಯಾಣಿಸುವ, ಭೋಜನ ಮತ್ತು ವಸತಿ ಹಾಗೂ ಇತರೆ ವೆಚ್ಚಗಳ ಬಗ್ಗೆ ನಾವು ಬೇರೆ ಬೇರೆ ರೀತಿಯ ವೆಚ್ಚಗಳನ್ನು ಭರಿಸಬೇಕಾಗುತ್ತದೆಂಬುದನ್ನು ನೀವೆಲ್ಲರೂ ಗಮನದಲ್ಲಿರಿಸಿಕೊಳ್ಳಬೇಕು, ತರಬೇತಿಯ ಅವಧಿಯು ಆರು ತಿಂಗಳಿನದ್ದಾಗಿರುತ್ತದೆ ಮತ್ತು ವಾಪಾಸು ಬಂದ ನಂತರ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಅವರ ಮೇಲಿರುತ್ತದೆ. ತಾಂತ್ರಿಕ ಮಾಹಿತಿಯು ಅತ್ಯಂತ ಗೌಪ್ಯತೆಯಿಂದ ಕೂಡಿದ್ದು ಅದು ಸಂಸ್ಥೆಯ ಭೌದ್ಧಿಕ ಆಸ್ತಿಯಾಗಿರುತ್ತದೆಂಬುದನ್ನು ನೀವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕೆಂಬುದಾಗಿ ನಾನು ಬಯಸುತ್ತೇನೆ ಮತ್ತು ತರಬೇತಿಗೆ ಆಯ್ಕೆಯಾದ ವ್ಯವಸ್ಥಾಪಕರುಗಳು, ತಾಂತ್ರಿಕ ಮಾಹಿತಿಯನ್ನು ಸೇವೆಯಲ್ಲಿರುವಾಗ ಅಥವಾ ಸೇವೆಯನ್ನು ಬಿಟ್ಟ ನಂತರವೂ ಯಾವುದೇ ಹೊರಗಿನ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುವುದಿಲ್ಲವೆಂಬುದಾಗಿ ಒಂದು ಕರಾರಿಗೆ ಸಹಿ ಮಾಡಬೇಕಾಗುತ್ತದೆ. ಅವರುಗಳು ಯಾವುದೇ ನಮ್ಮ ಪ್ರತಿಸ್ಪರ್ಧಿಗಳೊಂದಿಗೆ ಅಥವಾ ಇದೇ ರೀತಿಯ ಬಿಡಿಭಾಗಗಳನ್ನು ಉತ್ಪಾದನೆಯಲ್ಲಿ ತೊಡಗಿರುವ ವ್ಯಕ್ತಿಗಳೊಂದಿಗೆ ಸೇರಿಕೊಳ್ಳಬಾರದೆಂಬುದಾಗಿ ನಾನು ಇಚ್ಛಿಸುತ್ತೇನೆ. ಅವರುಗಳು ಸಂಸ್ಥೆಯಲ್ಲಿ 5 ವರ್ಷಗಳ ಸೇವೆಯನ್ನು ಸಲ್ಲಿಸಬೇಕಾಗುತ್ತದೆ. ಒಂದು ವೇಳೆ ಅವರುಗಳು ಯಾವುದೇ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ, ಸಂಸ್ಥೆಯು ಮಾಡಿರುವ ಎಲ್ಲಾ ವೆಚ್ಚಗಳನ್ನು ವಸೂಲಿ ಮಾಡುತ್ತದೆ ಹಾಗೂ ಹೆಚ್ಚಿನ ಹಾನಿಯನ್ನು ಹೊರಬೇಕಾಗುತ್ತದೆಂಬುದನ್ನು ನಾನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ, ಇಷ್ಟೇ ಅಲ್ಲದೆ ಮುಖ್ಯವಾಗಿ, ಅವರುಗಳು ಯಾವುದೇ ಸಂಭವನೀಯ ಸ್ಪರ್ಧೆಗಳ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರುವುಕ್ಕೂ ಸಹ ನಿರ್ಬಂಧ ಮಾಡಬಹುದಾಗಿರುತ್ತದೆ. ಇದರ ಮಹತ್ವವನ್ನು ನೀವೆಲ್ಲರೂ ಅರ್ಥ ಮಾಡಿಕೊಂಡಿದ್ದೀರೆಂಬ ವಿಶ್ವಾಸ ನನಗಿದೆ. ಇಲ್ಲಿ ನನಗೆ ಶ್ರೀ ರಮೇಶ್ ಮತ್ತು ವೀಣಾರವರಿಂದ ಉತ್ತಮ ಅಗತ್ಯವಾದ ಮತ್ತು ಸ್ಪಷ್ಟವಾದ ಪ್ರಸ್ತಾವನೆಯು ಬೇಕಾಗಿದೆ. ನಿಮಗೆಲ್ಲರಿಗೂ ಧನ್ಯವಾದಗಳು, ಮುಂದುವರೆಯಿರಿ ಮತ್ತು ಮುಂದಿನ ಸೋಮವಾರ ಪುನಃ ಭೇಟಿಯಾಗೋಣ.

ಶ್ರೀ ಖಾಡಿಲ್ಕರ್, ಪೂನಾದಲ್ಲಿರುವ ಪ್ರಿಮಿಯರ್ ಇಂಜಿನಿಯರಿಂಗ್ ಕಂಪೆನಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಸಂಸ್ಥೆಯು 15 ವರ್ಷಗಳಷ್ಟು ಹಳೆಯದಾಗಿದ್ದು, 1200 ಉದ್ಯೋಗಿಗಳ ಬಲವನ್ನು ಹೊಂದಿರುತ್ತದೆ-ಅವರುಗಳಲ್ಲಿ 300 ಮಂದಿ ವ್ಯವಸ್ಥಾಪಕೀಯ ಮತ್ತು ಮೇಲ್ವಿಚಾರಣ ಮಟ್ಟದಲ್ಲಿರುತ್ತಾರೆ ಮತ್ತು ಉಳಿದವರು ಕಾರ್ಮಿಕರು. ಪ್ರಸ್ತುತ, ಸಂಸ್ಥೆಯು ಒಂದು ಪ್ರಿಸಿಷನ್ ಬಿಡಿಭಾಗದ ಉತ್ಪಾದನೆಯ ಸಂಸ್ಥೆಯಾಗಿದ್ದು, ಆಟೋಮೊಬೈಲ್, ಲೊಕೋಮೋಟಿವ್ ಮತ್ತು ಏರ್‍ಕ್ರಾಫ್ಟ್ ಮಾರುಕಟ್ಟೆಯ ಅಗತ್ಯತೆಯನ್ನು ಪೂರೈಸುತ್ತಿದೆ.  ಶೇಕಡ 65ರಷ್ಟು ಮಾರುಕಟ್ಟೆಯ ಪಾಲನ್ನು ಹೊಂದಿರುವ ಸಂಸ್ಥೆ ಉತ್ತಮ ಖ್ಯಾತಿಯನ್ನು ಹೊಂದಿದ್ದು, ಬೆಳವಣಿಗೆ ಮತ್ತು ಲಾಭಾಂಶದಲ್ಲಿ ನಿರಂತರವಾದ ಏರಿಕೆಯತ್ತ ಸಾಗುತ್ತಿದೆ.

ಶ್ರೀ ಸೆಕ್ಸೇನ, ಕಾರ್ಯಾಚರಣೆ ಮುಖ್ಯಸ್ಥರಾಗಿರುತ್ತಾರೆ, ಶ್ರೀ ರಮೇಶ್ - ಮಾನವ ಸಂಪನ್ಮೂಲ ಮುಖ್ಯಸ್ಥರು ಮತ್ತು ಶ್ರೀಮತಿ ವೀಣಾ, ಕಂಪೆನಿ ಸೆಕ್ರಟರಿ ಮತ್ತು ಕಾನೂನು.

ಬೋರ್ಡ್‍ ರೂಮಿನಿಂದ ಹೊರಗೆ ಬರುವಾಗ, ರಮೇಶ್, ತುಂಬಾ ಕಠಿಣವಾದ ಕೆಲಸ ನಮ್ಮ ಮುಂದಿದೆ, ನೀವು ಕಾನೂನಿನ ದೃಷ್ಟಿಯಿಂದ ವ್ಯವಹರಿಸಲು ನೀವು ಕೆಲವೊಂದು ಸ್ಥೂಲವಾದ ಅಂಶಗಳನ್ನು ಮತ್ತು ವಿಷಯಗಳನ್ನು ತಯಾರಿಸಬೇಕು. ಕೆಲವು ಸಮಯದ ಹಿಂದೆ ಬೇರೊಂದು ಸಂಸ್ಥೆಯ ಕರಾರನ್ನು ನಿಮ್ಮೊಂದಿಗೆ ಹಂಚಿಕೊಂಡಿರುವುದು ನಿಮಗೆ ಜ್ಞಾಪಕವಿದೆಯೇ?  ನೀವು ಅದನ್ನು ಪತ್ತೆ ಹಚ್ಚಿ ಮತ್ತು ನಿಮ್ಮ ಅಂಶಗಳೊಂದಿಗೆ ನಾವು ನಾಳೆ ಬೆಳಿಗ್ಗೆ ಮತ್ತೆ ಭೇಟಿಯಾಗೋಣ, ಇದು ನಿಮಗೆ ಒಪ್ಪಿಗೆಯೇ? ಎಂಬುದಾಗಿ ವೀಣಾ ಹೇಳಿದರು. 

ರಮೇಶ್‍ರವರು ಉತ್ಸಾಹಭರಿತರಾಗಿ, ತಕ್ಷಣ ಆಗಬಹುದು ಎಂಬುದಾಗಿ ಹೇಳಿದರು. ಈ ಮಧ್ಯೆ ವೀಣಾರವರೂ ಸಹ ಸಂಬಂಧಪಟ್ಟ ಕೆಲವೊಂದು ಅಂಶಗಳನ್ನು ತಯಾರಿಸುವುದಾಗಿ ಪ್ರತಿಕ್ರಿಯಿಸಿದರು.

ಮರುದಿನ ರಮೇಶ್ ಮತ್ತು ವೀಣಾರವರ ಮಾತುಕತೆಯ ಸಭೆಯಿತ್ತು. ವೀಣಾ, ನಾನು ಕೆಳಕಂಡ ಕೆಲವೊಂದು ಅಂಶಗಳನ್ನು ತಯಾರಿಸಿರುತ್ತೇನೆ ಅದರ ಮೇಲೆ ನಾವು ಚರ್ಚಿಸಬಹುದು. ನಿಮ್ಮೊಂದಿಗೆ ಹೆಚ್ಚಿನ ವಿಷಯಗಳೇನಾದರೂ ಇದ್ದಲ್ಲಿ, ನಾವು ಅದನ್ನು ಸೇರಿಸಿಕೊಂಡು ಚರ್ಚಿಸಬಹುದು.
 
ರಮೇಶ್‍ರವರು ಮಾಡಿರುವ ಅಂಶಗಳೆಂದರೆ :
ಎ. ಜರ್ಮನಿಗೆ ತರಬೇತಿಗಾಗಿ ನಿಯೋಜಿಸುವ ಅವಧಿಯು 12 ತಿಂಗಳುಗಳು.

ಬಿ. ತರಬೇತಿಯನ್ನು ಸಂಪೂರ್ಣ ಆಸಕ್ತಿಯಿಂದ ಕೈಗೊಳ್ಳಬೇಕು ಮತ್ತು ಬೆಕ್ಸ್‍ಟೀರ್‍ನ ಅಭಿಪ್ರಾಯದ ಅಗತ್ಯತೆಯಿರುತ್ತದೆ.

ಸಿ. ತರಬೇತಿ ಅವಧಿಯಲ್ಲಿ ಮೌಲ್ಯ ಮಾಪನವು ಅತೃಪ್ತಿಕರವಾಗಿದ್ದಲ್ಲಿ, ಅವರನ್ನು ವಾಪಾಸು ಕರೆಸಿಕೊಳ್ಳಲಾಗುವುದು.  ಸಂಸ್ಥೆಯು ಮಾಡಿದ ಸಂಪೂರ್ಣ ವೆಚ್ಚದ ವಸೂಲಾತಿಯ ವಿಚಾರವೇನು?

ಡಿ. ಅದೇ ರೀತಿ, ಆತ ರಾಜೀನಾಮೆಯನ್ನು ಸಲ್ಲಿಸಿ, ತರಬೇತಿಯನ್ನು ತ್ಯಜಿಸಿದಲ್ಲಿ, ವಸೂಲಾತಿಯು ಹೇಗೆ?

ಇ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಪೂನಾಕ್ಕೆ ಹಿಂದಿರುಗಿದಾಗ ಆತ ಸಂಸ್ಥೆಯಲ್ಲಿ 5 ವರ್ಷಗಳ ಸೇವೆಯನ್ನು ಸಲ್ಲಿಸಬೇಕು.

ಎಫ್. ಅತ ಇದೇ ರೀತಿಯ ವ್ಯವಹಾರವನ್ನು ನಡೆಸುವ ಅಥವಾ ಯಾವುದೇ ಪ್ರತಿಸ್ಪರ್ಧಿ ಸಂಸ್ಥೆಯಲ್ಲಿ ಯಾವುದೇ ಉದ್ಯೋಗವನ್ನು ತೆಗೆದುಕೊಳ್ಳುವುದಿಲ್ಲವೆಂಬ ಷರತ್ತಿಗೆ ಆತ ಬದ್ಧನಾಗಿರುತ್ತಾನೆ.

ಜಿ. ತರಬೇತಿಯ ಸಂಪೂರ್ಣ ವೆಚ್ಚವನ್ನು ವಸೂಲು ಮಾಡುವುದರೊಂದಿಗೆ ನಾವು ಎಷ್ಟು ಹಾನಿಗೆ ಹಕ್ಕೊತ್ತಾಯಿಸಬಹುದು ಎಂಬುದನ್ನು ನಾವು ತಿಳಿಸಬೇಕು?

ಎಚ್. ಕನಿಷ್ಟ 10 ವರ್ಷಗಳ ಅವಧಿಯವರೆಗೆ ಆತ ಬೇರೆ ಉದ್ಯೋಗದಾತರಲ್ಲಿ ಉದ್ಯೋಗವನ್ನು ಸ್ವೀಕರಿಸುವುದಿಲ್ಲವೆಂಬ ಮುಚ್ಚಳಿಕೆಯನ್ನು ಆತ ನೀಡಬೇಕು.

ಐ. ಆತ ಸಂಸ್ಥೆಯ ಉದ್ಯೋಗಾವಧಿಯಲ್ಲಿ ಅಥವಾ ಸಂಸ್ಥೆಯ ಉದ್ಯೋಗವನ್ನು ತ್ಯಜಿಸಿದ ನಂತರವೂ ಯಾವುದೇ ತಾಂತ್ರಿಕ ತಿಳುವಳಿಯನ್ನು ಅಥವಾ ಯಾವುದೇ ಸಂಬಂಧಪಟ್ಟ ಮಾಹಿತಿಯನ್ನು ಯಾವುದೇ ಹೊರಗಿನ ವ್ಯಕ್ತಿಗಳಿಗೆ ಬಹಿರಂಗಪಡಿಸುವುದಿಲ್ಲ ಅಥವಾ ಬಯಲು ಮಾಡುವುದಿಲ್ಲವೆಂಬ ಮುಚ್ಚಳಿಕೆಯನ್ನು ನೀಡಬೇಕು.

ಒಳ್ಳೆಯದು ರಮೇಶ್, ನೀವು ಅತ್ಯಂತ ಸೂಕ್ತವಾದ ಅಂಶಗಳನ್ನು ನೀಡಿದ್ದೀರಿ.  ತನ್ಮಧ್ಯೆ, ನಾನು ನಿನ್ನೆ ತಿಳಿಸಿದಂತೆ ನಿಮಗೆ ಬೇರೆ ಸಂಸ್ಥೆಯ ಕರಾರನ್ನು ನೋಡಲು ಸಾಧ್ಯವಾಗಿದೆಯೆ  ವೀಣಾರವರು ಹೇಳಿದರು. ಹೌದು, ನಾನು ವಿವರವಾಗಿ ನೋಡಿದ್ದೇನೆ.  ವಸ್ತುತ:, ಎಲ್ಲಾ ಅಂಶಗಳನ್ನೊಳಗೊಂಡಂತೆ ಕರಾರಿನ ಎಲ್ಲಾ ಷರತ್ತುಗಳನ್ನು ಬಹಳ ಬಲವಾದ ಪದಗಳಿಂದ ಬರೆಯಲಾಗಿದೆ, ಅದನ್ನು ನಿಮಗೆ ಓದಿ ಹೇಳುತ್ತೇನೆ.  ಕೆಲವೊಂದು ಸೂಕ್ತ ಮಾರ್ಪಾಡುಗಳೊಂದಿಗೆ ನಾವೂ ಸಹ ಹೆಚ್ಚಿನ ಷರತ್ತುಗಳನ್ನು ಸೇರಿಸಿಕೊಳ್ಳಬಹುದಾಗಿದೆ ಎಂಬುದಾಗಿ ರಮೇಶ್‍ರವರು ವಿಶ್ವಾಸಪೂರ್ವಕವಾಗಿ ಹೇಳಿದರು.

ಆದರೆ ರಮೇಶ್ ನಾವು ನ್ಯಾಯಾಲಯದ ದೃಷ್ಟಿಯಿಂದ ಜಾರಿಗೆ ತರಬಹುದೇ ಎಂಬುದನ್ನು ಅತ್ಯಂತ ನಿಕಟವಾಗಿ ಪರೀಕ್ಷಿಸಬೇಕಾಗಿದೆ.  ಇಲ್ಲವಾದಲ್ಲಿ, ಅದು ಕೇವಲ ಪತ್ರದಲ್ಲಿ ಮಾತ್ರ ಇರುತ್ತದೆ ಎಂಬುದು ನಿಮಗೆ ತಿಳಿದಿರುತ್ತದೆ. ವೀಣಾರವರು ಹೇಳಿದರು. ಅವರು ಮುಂದುವರೆಸುತ್ತಾ, ಈ ಯೋಜನೆಯ ಬಜೆಟ್‍ನ್ನು, ಅದರಲ್ಲಿಯೂ, ತರಬೇತಿ ವೆಚ್ಚದ ಹಂಚಿಕೆ ಇತ್ಯಾದಿಗಳ ಬಜೆಟ್ ಬಗ್ಗೆ  ಮೊದಲೇ ಅಂದಾಜು ಮಾಡುವಂತೆ ನಾನು ಹಣಕಾಸು ವಿಭಾಗಕ್ಕೆ ಕೇಳಿದ್ದೇನೆ.

ವೀಣಾರವರೆ, ಈ ಮಧ್ಯೆ ನಾವು ಯಾವುದೇ ವಿಳಂಬವಿಲ್ಲದೆ ಈ ಬಗ್ಗೆ ಕೆಲಸವನ್ನು ಆರಂಭಿಸಬೇಕು ರಮೇಶ್‍ರವರು ಸೂಚಿಸಿದರು. 

ನನಗೆ ಕೆಲವು ಮುಖ್ಯವಾದ ಸಮಸ್ಯೆಗಳಿವೆ, ಮೊದಲನೆಯದಾಗಿ ಭಾರತೀಯ ಕರಾರು ಕಾಯ್ದೆಯ ಕಲಂ 27ರ0ತೆ ಅದು ಸಾರ್ವಜನಿಕ ನೀತಿಗೆ ವಿರುದ್ಧವಾಗಿದ್ದಲ್ಲಿ ಕರಾರು ಅನೂರ್ಜಿತವಾಗುತ್ತದೆ. ಇಲ್ಲಿ ಸಾರ್ವಜನಿಕ ನೀತಿ ಎಂದರೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿ, ಅಂದರೆ ಆತನ ಮೇಲೆ ನಿರ್ಬಂಧಗಳನ್ನು ಹೇರಿದಲ್ಲಿ ಅದು ಆತನ ಹಕ್ಕುಗಳಿಗೆ ಪೆಟ್ಟುಕೊಟ್ಟಂತಾಗುತ್ತದೆ.  ಒಬ್ಬ ವ್ಯಕ್ತಿಗೆ ಯಾವುದೇ ಉದ್ಯೋಗವನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧವನ್ನು ಮಾಡಿದಲ್ಲಿ ಅಂತಹ ಕರಾರು ಕಲಂ 27ರಂತೆ ಪರಿಣಾಮವಾಗುತ್ತದೆ ಮತ್ತು ಅದು ಅನೂರ್ಜಿತವಾಗುತ್ತದೆ ಎಂಬುದಾಗಿ ನಾವು ಅರ್ಥೈಸಿಕೊಳ್ಳಬಹುದು?  ವೀಣಾರವರು ಪ್ರಶ್ನಾರ್ಥಕ ಭಾವವನ್ನು ವ್ಯಕ್ತಪಡಿಸಿದರು.

ನೋಡಿ ವೀಣಾರವರೆ, ಅಂದರೆ ನೀವು ಹೇಳುವುದು ಆತ ಗಳಿಸಿರುವ ತಾಂತ್ರಿಕ ಜ್ಞಾನದಿಂದ ನಮ್ಮ ಪ್ರತಿಸ್ಫರ್ಧಿಗಳಲ್ಲಿ ಉದ್ಯೋಗವನ್ನು ಪಡೆಯುವಲ್ಲಿ ಮುಕ್ತನಾಗಿರಬೇಕು ಎಂಬ ಅರ್ಥ ಬರುತ್ತದೆ ಮತ್ತು ಆಗ ನಾವು ನಿಸ್ಸಹಾಯಕರಾಗುತ್ತೇವೆ. ನಾವು ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು, ಇಲ್ಲವಾದಲ್ಲಿ, ಶ್ರೀ ಖಾಡಿಲ್ಕರ್‍ರವರು ಇದನ್ನು ಎಂದಾದರೂ ಒಪ್ಪುವರೆ ಎಂಬುದಾಗಿ ರಮೇಶ್‍ರವರು ತಕ್ಷಣ ಪ್ರತಿಕ್ರಿಯಿಸಿದರು.

ನೋಡಿ ರಮೇಶ್ ಕೇವಲ ಇದೊಂದೇ ಸಮಸ್ಯೆಯಲ್ಲ, ಹಲವಾರಿವೆ. ಉದ್ಯೋಗದಲ್ಲಿರುವಾಗ ಮತ್ತು ಉದ್ಯೋಗದಿಂದ ಹೊರಗೆ ಬಹಿರಂಗಗೊಳಿಸದಿರುವಿಕೆ ಕಲಂನಲ್ಲಿ, ನಿರ್ಬಂಧಿತ ಕಲಂಗಳಾದಂತಹ, ಉದ್ಯೋಗಾವಧಿಯ ಅವಧಿ, ಒಂದು ವೇಳೆ ಅಂತಹ ಅವಧಿಯನ್ನು ಪೂರ್ಣಗೊಳಿಸದೆ ಕೆಲಸ ಬಿಟ್ಟಲ್ಲಿ, ಸಮಾಪನಗೊಳಿಸಿದ, ಸಮಾಪನಗೊಳಿಸದ ಹಾನಿ ಇತ್ಯಾದಿಗಳ ಬಗ್ಗೆ ವಸೂಲಾತಿ ಪ್ರಕ್ರಿಯೆ ಇವುಗಳು ಗಂಭೀರ ಸಮಸ್ಯೆಗಳು.  ವಾಸ್ತವವೆಂದರೆ, ನಿನ್ನೆ ಇಡೀ ದಿನ ಕಾನೂನು ದೃಷ್ಟಿಯಿಂದ ಈ ಬಗ್ಗೆ ಅಧ್ಯಯನ ಮಾಡಿರುತ್ತೇನೆ. ಈ ಬಗ್ಗೆ ಹಲವಾರು ತೀರ್ಮಾನಗಳಾಗಿವೆ ಮತ್ತು ನಾವು ಕರಾರಿನ ಕರಡನ್ನು ಮಾಡುವಾಗ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಹಾಗೂ ತಂತ್ರ ಕುಶಲತೆಯಿಂದ ಕೆಲಸ ನಿರ್ವಹಿಸಬೇಕು.
ರಮೇಶ್ ಮತ್ತು ವೀಣಾರವರು ಸಾಕಷ್ಟು ಚರ್ಚಿಸಿದ ನಂತರ ಸಂಸ್ಥೆಯ ಕಾನೂನು ಸಲಹೆಗಾರರಾದ ಶ್ರೀ ರಾವ್‍ರೊಂದಿಗೆ ಚರ್ಚಿಸುವ ತೀರ್ಮಾನಕ್ಕೆ ಬಂದರು.

ಒಳ್ಳೆಯದು, ನೀವಿಬ್ಬರೂ ಸವಿಸ್ತಾರವಾದ ಸಿದ್ಧತೆಯನ್ನು ಮಾಡಿರುವಿರಿ ಮತ್ತು ಬೇರೆ ಬೇರೆ ನ್ಯಾಯಾಲಯಗಳ ಪ್ರಮುಖ ಕಾನೂನು ಅರ್ಥವಿವರಣೆಯೊಂದಿಗೆ ನಿಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದೀರಿ. ನೀವು ನನ್ನ ಕೆಲಸವನ್ನು ಸುಲಭವಾಗಿಸಿದ್ದೀರಿ ಮತ್ತು ನಾನು ವಿವರವಾಗಿ ನಿಮಗೆ ವಿವರಿಸುತ್ತೇನೆ ಅದರ ಪ್ರಕಾರ ನೀವು ಮುಂದಿನ ಯೋಜನೆಯನ್ನು ಮಾಡಬಹುದು ರಮೇಶ್ ಮತ್ತು ವೀಣಾರವರೊಂದಿಗೆ ಸಮಾಲೋಚನಾ ಸಭೆಯಲ್ಲಿ ಶ್ರೀ ರಾವ್‍ರವರು ಹೇಳಿದರು.  ವೀಣಾ, ನೀವು ಹೇಳಿದ ಅಂಶ ಸಾರ್ವಜನಿಕ ನೀತಿಗೆ ವಿರುದ್ಧವಾದ ಕರಾರು ಷರತ್ತುಗಳನ್ನು ಮಾಡಿದಲ್ಲಿ ಜಾರಿಗೊಳಿಸಲಾಗದೆ ಅನೂರ್ಜಿತವಾಗುತ್ತದೆಂಬ ಅಂಶ ಸಂಪೂರ್ಣವಾಗಿ ನಿಜ. ಈಗ ನಾನು ವಿಷಯಕ್ಕೆ ಬರುವ ಮೊದಲು, ಎಲ್ಲಾ ಷರತ್ತುಗಳು ಅಥವಾ ನಿರ್ಬಂಧಗಳು ಇತ್ಯಾದಿಗಳನ್ನು ಖಂಡಿತವಾಗಿ ಸಂಸ್ಥೆಯೊಂದಿಗಿನ ಆತನ ಉದ್ಯೋಗಾವಧಿಯಲ್ಲಿ ಜಾರಿಗೊಳಿಸಬಹುದು, ಏಕೆಂದರೆ ಆತ ಉದ್ಯೋಗಿಯಾಗಿರುವುದರಿಂದ ಅವುಗಳಿಗೆ ಬದ್ಧನಾಗಿರುತ್ತಾನೆ.  ಆದರೆ ಆತ ಸಂಸ್ಥೆಯನ್ನು ಬಿಟ್ಟ ತಕ್ಷಣ, ಅಂದರೆ, ಉದ್ಯೋಗಾವಧಿಯ ನಂತರ ಜಾರಿಗೊಳಿಸುವುದು ಬಹಳ ಸಮಸ್ಯೆ. ನಾವು ಮುಂದುವರೆಯೋಣ.  ಸಾರ್ವಜನಿಕ ನೀತಿ ಎಂಬುದರ ಬಗ್ಗೆ ಹಲವಾರು ತೀರ್ಪುಗಳಲ್ಲಿ ವಿವರಿಸಲಾಗಿದೆ. ಉದಾಹರಣೆಗೆ, ಸರ್ ರಿಚರ್ಡ್ ಕೋಚ್ ಸಿ.ಜೆ, ಮಧುಪ್ ಚಂದರ್ ವರ್ಸಸ್ ರಾಜ್‍ಕುಮಾರ್ ದಾಸ್ ಪ್ರಕರಣದಲ್ಲಿ (1874) 14 ಬೆಂಗ್, ಎಲ್.ಆರ್.76, ಕರಾರಿನ ಅವಧಿಯ ಉತ್ತರಾರ್ಧದಲ್ಲಿ ವ್ಯಾಪಾರಿ ನಿರ್ಬಂಧವನ್ನು ಸಾರ್ವಜನಿಕ ನೀತಿಗೆ ವಿರುದ್ಧವಾಗಿ ವ್ಯಾಖ್ಯಾನಿಸಲಾಗಿದೆ, ಪರ್ಸೆಪ್ಟ್ ಡಿ'ಮಾರ್ಕ್ (ಇಂಡಿಯಾ) (ಪ್ರೈ) ಲಿಮಿಟೆಡ್ ವರ್ಸಸ್ ಜಹೀರ್ ಖಾನ್ ಮತ್ತು ಇತರರು (2006) 4 ಎಸ್‍ಸಿಸಿ ಪ್ರಕರಣದಲ್ಲಿ, 132 ವರ್ಷಗಳ ಹಳೆಯ ವ್ಯಾಖ್ಯಾನ ಇಂದಿಗೂ ಬದಲಾಯಿಸದೆ ಉಳಿದಿದೆ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ. ಅದೇ ರೀತಿ, ನಿರಂಜನ್ ಶಂಕರ್ ಗೋಲಿಕರಿ, ಸೂಪರಿಂಟೆಡೆನ್ಸ್ ಕಂಪೆನಿ ಆಫ್ ಇಂಡಿಯಾ ಮತ್ತು ಗುಜರಾತ್ ಬಾಟಲಿಂಗ್, ಅಮೆರಿಕನ್ ಎಕ್ಸ್‍ಪ್ರೆಸ್, ವಿಪ್ರೋ ಲಿಮಿಟೆಡ್ ವರ್ಸಸ್ ಬೀಕ್ಮನ್ ಕಟ್ಲರ್ ಇಂಟರ್‍ನ್ಯಾಶನಲ್, ಆರ್.ಬಾಬು ಮತ್ತು ಇತರರು ವರ್ಸಸ್ ಟಿಟಿಕೆ ಎಲ್ಐಜಿ ಲಿಮಿಟೆಡ್‍ನಂತಹ ಹಲವಾರು ಪ್ರಕರಣಗಳಲ್ಲಿ ನಿರ್ಬಂಧಿತ ಕರಾರುಗಳು ಜಾರಿಗೊಳಿಸಲಾಗುವುದಿಲ್ಲ ಎಂಬುದಾಗಿ ಒತ್ತಿಹೇಳಲಾಗಿದೆ.

ಶ್ರೀ ರಾವ್‍ರವರು ಮುಂದುವರೆಸುತ್ತಾ ನಿಗದಿತ ಹಾನಿ ಪರಿಹಾರದ ಕರಾರನ್ನು ಮುರಿದ ಬಗ್ಗೆ ಖಂಡಿತವಾಗಿಯೂ ಹಕ್ಕೊತ್ತಾಯವನ್ನು ಮಾಡಬಹುದು. ನಿಗದಿತ ಹಾನಿ ಪರಿಹಾರವೆಂದರೆ ಪೂರ್ವ ಅಂದಾಜಿನ ಮತ್ತು ಆಡಳಿತವರ್ಗವು ಖರ್ಚು ಮಾಡಬಹುದಾದ ಎಲ್ಲಾ ವೆಚ್ಚಗಳು.  ಹಾಗಾಗಿ, ಈ ಪೂರ್ವ ಅಂದಾಜಿನ ಮತ್ತು ಪೂರ್ವನಿರ್ಧಾರಿತ ಮೊತ್ತವನ್ನು ಕರಾರಿನಲ್ಲಿ ಸೇರಿಸಬಹುದು. ನ್ಯಾಯಯುತವಾಗಿದ್ದಲ್ಲಿ  ಪ್ರತಿ ಪ್ರಕರಣದ ವಾಸ್ತವಾಂಶ ಮತ್ತು ಸಂದರ್ಭಾನುಸಾರ ನಿಗದಿತ ಹಾನಿ ಪರಿಹಾರಗಳಿಗೆ ನ್ಯಾಯಾಲಯವು ಅನುಮತಿಸುತ್ತದೆ. ಮತ್ತೊಂದು ಅಂಶವೆಂದರೆ, ಒಂದು ವೇಳೆ ಆತ ಸಂಸ್ಥೆಯಲ್ಲಿ 3 ವರ್ಷಗಳು ಸೇವೆಯನ್ನು ಸಲ್ಲಿಸಲು ವಿಫಲನಾದಲ್ಲಿ, ಸಂಸ್ಥೆಯೂ ಸಹ ರೂ.ಐದು ಲಕ್ಷಗಳು ಅಥವಾ ವೇತನದ ಐದು ಪಟ್ಟು ಮೊತ್ತವನ್ನು ನಮೂದಿಸಬಹುದೆಂಬುದನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು. ಕಾನೂನಿನಲ್ಲಿ ಇದನ್ನು ದಂಡ ಅಥವಾ ಟೆರೋರೆಮ್ ಎಂಬುದಾಗಿ ಕರೆಯಲಾಗುತ್ತದೆ. ಇಲ್ಲಿಯೂ ಸಹ, ಸೂಕ್ತವಾದ ನ್ಯಾಯಯುತ ಪರಿಹಾರಕ್ಕೆ ನ್ಯಾಯಾಲಯವು ಅನುಮತಿಸಬಹುದು ಹಾಗೂ ಆತ ಸೇವೆ ಸಲ್ಲಿಸದ ಸೇವಾವಧಿಗನುಗುಣವಾಗಿ ಹಕ್ಕೊತ್ತಾಯಕ್ಕೆ ಅನುಮತಿಸಬಹುದೆಂಬುದನ್ನೂ ಸಹ ನೀವು ಗಮನದಲ್ಲಿಟ್ಟುಕೊಳ್ಳಬೇಕು. ವಿವರಿಸುವುದಾದರೆ, ಆತ 2 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಮತ್ತು ಬಾದಿ ಒಂದು ವರ್ಷ ಸೇವೆ ಉಳಿದಿದ್ದಲ್ಲಿ ಹಕ್ಕೊತ್ತಾಯವು ಅನುಗುಣವಾಗಿ ಒಂದು ವರ್ಷಕ್ಕೆ ಮಾತ್ರ ಇರುತ್ತದೆ ಮತ್ತು ಸಂಸ್ಥೆಯು ಸಂಪೂರ್ಣ ಮೊತ್ತಕ್ಕೆ ಹಕ್ಕೊತ್ತಾಯಿಸುವಂತಿಲ್ಲ ಎಂಬುದಾಗಿ ಹೇಳಬಹುದು.

ನಾವು ಕರಾರನ್ನು ತಯಾರಿಸುವಾಗ ನಾವು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದಾಗಿ ವೀಣಾ ಸೇರಿಸಿದರು.

ರಮೇಶ್‍ರವರು ತಕ್ಷಣ ಪ್ರತಿಕ್ರಯಿಸಿ  ಒಬ್ಬ ನಮ್ಮ ಪ್ರತಿಸ್ಫರ್ಧಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು ಮತ್ತು ನಿಗದಿತ ಹಾನಿಯ ಪರಿಹಾರ ಮತ್ತು ನಿಗದಿಪಡಿಸದ ಹಾನಿಯ ಪರಿಹಾರಕ್ಕೆ ಹಕ್ಕೊತ್ತಾಯಿಸಿ, ಆಗ ಆತ ಬಯಸಿ ಅಥವಾ ನಮ್ಮ ಸಂಸ್ಥೆಯ ವ್ಯವಹಾರಕ್ಕೆ ಯಾವುದೇ ಹಾನಿಯನ್ನು ಮಾಡಿದಂತಹ ಹಲವಾರು ನಿರ್ಬಂಧಗಳನ್ನು ಕಾಣಬರುತ್ತವೆ?  ನಾವು ಅಷ್ಟೂ ನಿಸ್ಸಹಾಯಕರೆ?

ಸಮಸ್ಯೆಯಿಲ್ಲ, ರಮೇಶ್ ಸಂಸ್ಥೆಯು ವ್ಯವಹಾರದ ಹಾನಿ ಅಥವಾ ನಷ್ಟದ ವಿರುದ್ಧ ಖಂಡಿತ ಹಾನಿಗೆ ಹಕ್ಕೊತ್ತಾಯಿಸಬಹುದು. ಆದರೆ ಈ ಮೊತ್ತವನ್ನು ಸರಿಯಾಗಿ, ಪ್ರಮಾಣದ ಪ್ರಕಾರ ಮೌಲೀಕರಿಸಬೇಕು, ಪ್ರಕರಣದ ವಾಸ್ತವತೆ ಮತ್ತು ಸನ್ನಿವೇಶಕ್ಕನುಗುಣವಾಗಿ ನ್ಯಾಯಾಲಯವು ಪರಿಹಾರಕ್ಕೆ ಅನುಮತಿಸಬಹುದು ಎಂಬುದಾಗಿ ಶ್ರೀ ರಾವ್ ಹೇಳಿದರು.

ಧನ್ಯವಾದಗಳು ಶ್ರೀ ರಾವ್‍ರವರೆ, ಕರಾರನ್ನು ಹೇಗೆ ತಯಾರಿಸಬಹುದು ಎಂಬ ಬಗ್ಗೆ ನಮಗೆ ಸ್ಪಷ್ಟವಾಯಿತು ಮತ್ತು ನಾವು ವ್ಯವಸ್ಥಾಪಕ ನಿರ್ದೇಶಕರಿಗೆ ಮನದಟ್ಟು ಮಾಡಬಹುದು ವೀಣಾ ಮುಕ್ತಾಯಗೊಳಿಸಿದರು.

ಸೂಚನೆ : ಈ ಲೇಖನದ ಕುರಿತು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಕೆಳಗಿನ Comment Box ನಲ್ಲಿ ದಾಖಲಿಸಿ.

ನೀವೂ ಸಹ ಲೇಖನಗಳನ್ನು ಪ್ರಕಟಿಸಲು ನಮ್ಮ ಸಂಸ್ಥೆಗೆ ಕಳುಹಿಸಿಕೊಡಬಹುದು. ಆಯ್ಕೆಗೊಂಡ ಲೇಖನಗಳನ್ನು ವೆಬ್‍ಸೈಟ್‍ನಲ್ಲಿ ಹಾಗೂ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.

ಲೇಖನ ಸಲ್ಲಿಸಿ
0 Comments

Your comment will be posted after it is approved.


Leave a Reply.

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    Picture

    Inviting articles

    Inviting meaningful articles on HR and Labour Law to publish in our website 

    Submit Your article
    Human Resources And Labour Law Classes

    RSS Feed


Powered by Create your own unique website with customizable templates.
  • HOME
    • Team
  • POSH
  • Online Groups
  • Books
  • BLOG
  • Contact Us