Nirathanka
  • HOME
    • Team
  • POSH
  • Online Groups
  • Books
  • BLOG
  • Contact Us

ಉದ್ದಿಮೆ/ಕೈಗಾರಿಕೆಯಲ್ಲಿ ಮಾನವ ಸಂಬಂಧಗಳ ಪಾತ್ರ (Role of Human Relations in Industry)

4/1/2019

0 Comments

 
Picture
ಗೋವಿಂದರಾಜು ಎನ್.ಎಸ್
ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕರು
ಕರ್ನ್ ಲಿಬರ್ಸ್ ಇಂಡಿಯಾ ಪ್ರೈ. ಲಿ, ತುಮಕೂರು
ಮಾನವ ಸಂಘಜೀವಿ ಮತ್ತು ಸಮಾಜಜೀವಿ. ತನ್ನ ಅಕ್ಕಪಕ್ಕ ಇತರರು ಇಲ್ಲದಿದ್ದರೆ ಆತನ ಜೀವನವೇ ಇಲ್ಲ. ತನ್ನ ಜೀವನದುದ್ದಕ್ಕೂ ಒಂದಲ್ಲ ಒಂದು ರೀತಿಯಲ್ಲಿ ಒಂದಲ್ಲ ಒಂದು ರೀತಿಯ ಸಂಬಂಧಗಳ ನಡುವೆ ಬದುಕುತ್ತಾನೆ. ಹಾಗಾದರೆ, ಸಂಬಂಧಗಳು ಎಂದರೇನು? ಅಪ್ಪ ಅಮ್ಮ ಇವರ ನಡುವೆ ಮಕ್ಕಳಿಗಿರುವ ಪ್ರೀತಿ ಪ್ರೇಮ ಒಡನಾಟ ಇವು ಸಂಬಂಧಗಳೇ? ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ ಇವರ ನಡುವೆ ಇರುವ ಸಂಬಂಧಗಳು ಸಂಬಂಧಗಳೇ? ಇವೆಲ್ಲವೂ ಸಂಬಂಧಗಳೇ. ನಾವು ಅಂದುಕೊಂಡ ಹಾಗೆಲ್ಲ ಸಂಬಂಧಗಳು ಮತ್ತು ನಾವು ಬೆಳೆಸಿಕೊಂಡ ಹಾಗೆ ಸಂಬಂಧಗಳು. ಒಳ್ಳೆಯ ಸಂಬಂಧಗಳು ಮತ್ತು ಕೆಲವೊಮ್ಮೆ ಒಳ್ಳೆಯವಲ್ಲದ ಸಂಬಂಧಗಳು ನಮ್ಮ ಅನುಭವಕ್ಕೆ ಬರಬಹುದು. ನನ್ನ ಪ್ರಕಾರ, ‘ನಾವು ಹೇಗೆ ಮತ್ತೊಬ್ಬರನ್ನು ಭಾವಿಸುತ್ತೇವೆ, ನಾವು ತೋರುವ ವರ್ತನೆಯ ಸಕಾರಾತ್ಮಕ ತೀವ್ರತೆ, ಅವರೊಡನೆ ಸಹಕರಿಸುವ ರೀತಿ, ಅವರ ಭಾವನೆಗಳಿಗೆ, ಕಷ್ಟಗಳಿಗೆ ಸ್ಪಂಧಿಸುವ ರೀತಿ, ಅವರೊಡನೆ ನಡೆದುಕೊಳ್ಳುವ ರೀತಿ, ತೋರುವ ಪ್ರೀತಿ ವಾತ್ಯಲ್ಯ ಇವೆಲ್ಲವನ್ನೂ ಒಟ್ಟಾರೆಯಾಗಿ ಸಂಬಂಧಗಳು ಎನ್ನಬಹುದು.’

Read More
0 Comments

ಉದ್ಯೋಗದ ಕರಾರನ್ನು ಕಾನೂನಿನಲ್ಲಿ ಜಾರಿಗೆ ತರುವುದು : ಪ್ರಕರಣದ ಅಧ್ಯಯನ

7/12/2018

0 Comments

 
Picture
ಕೆ. ವಿಠ್ಠಲ್ ರಾವ್
ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಅಂಡ್ ಲೀಗಲ್ ಅಡ್ವೈಸರ್

ಶ್ರೀ ಖಾಡಿಲ್ಕರ್, ಎಲ್ಲರಿಗೂ ನಮಸ್ಥಾರ.  ಸಂಸ್ಥೆಯು ತೆಗೆದುಕೊಳ್ಳಲು ನಿರ್ಧಸಿರುವ ಒಂದು ಪ್ರಮುಖ ಯೋಜನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ.  ನಿಮಗೆಲ್ಲಾ ತಿಳಿದಿರುವಂತೆ ಜರ್ಮನಿಯ ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ, ಏರ್‍ಕ್ರಾಫ್ಟ್‍ನ ಟ್ರಾನ್ಸ್‍ಮಿಷನ್ ಬಿಡಿಭಾಗಗಳನ್ನು ಉತ್ಪಾದಿಸಲು ಮತ್ತು ಸರಬರಾಜು ಮಾಡುವ ಬಗ್ಗೆ ಬೆಕ್ಸ್ಟೀರ್ನೊಂದಿಗೆ ಒಂದು ಕರಾರಿಗೆ ಸಹಿ ಮಾಡಿರುತ್ತೇನೆ. ಆ ಬಿಡಿಭಾಗವು ನವೀನ ತಾಂತ್ರಿಕತೆಯೊಂದಿಗೆ ಅತ್ಯಂತ ಕ್ಲಿಷ್ಟಕರವಾದದ್ದಾಗಿರುತ್ತದೆ.   ನಮ್ಮ ಸಂಸ್ಥೆಯು ಅಂತಹ ಬಿಡಿಭಾಗವನ್ನು ಉತ್ಪಾದಿಸಿ ರಫ್ತು ಮಾಡುವ ಮೊದಲನೇ ಸಂಸ್ಥೆಯಾಗಿರುತ್ತದೆ. ಅಂದಾಜಿನ ಪ್ರಕಾರ, ನಮಗೆ ಬೇಡಿಕೆ ಆದೇಶ ಬಂದಲ್ಲಿ, ನಮ್ಮ ಉತ್ಪಾದನಾ ಸಾಮರ್ಥ್ಯದ ಬಳಕೆಯು ಶೇಕಡ 85ರಷ್ಟಕ್ಕೆ ತಲುಪಬಹುದು ಮತ್ತು ಲಾಭಾಂಶವೂ ಸಹ ಉತ್ತಮವಾಗಿರುತ್ತದೆ.  

Read More
0 Comments

ಮಾನವ ಸಂಪನ್ಮೂಲ ನಿರ್ವಹಣೆಯಲ್ಲಿ ಕನ್ನಡಿಗರು ಮತ್ತು ಕನ್ನಡ ಭಾಷೆ

7/10/2018

0 Comments

 
Picture
ಜಿ.ಪಿ.ನಾಯಕ್
ಪ್ರಧಾನ ಸಲಹೆಗಾರರು, ಟ್ಯಾಲೆಂಟ್ ಅವಿನ್ಯೂಸ್.

ಮಾನವ ಸಂಪನ್ಮೂಲ ನಿರ್ವಹಣೆಯು (ಮಾ.ಸಂ.ನಿ.) ಸಮಕಾಲೀನ ಕೈಗಾರಿಕೆ ಮತ್ತು ಇತರೆ ಸಂಸ್ಥೆಗಳಲ್ಲಿನ ಆಡಳಿತ ವ್ಯವಸ್ಥೆಯ ಮುಖ್ಯ ಅಂಗವಾಗಿದೆ. ಏಕೆಂದರೆ ಯಾವುದೇ ಕೈಗಾರಿಕೆ ಅಥವಾ ಸಂಸ್ಥೆಯ ಉಳಿವು-ಅಳಿವು ಅದರ ಮಾನವ ಸಂಪನ್ಮೂಲ ನಿರ್ವಹಣೆಯ ದಕ್ಷತೆಯನ್ನು ಅವಲಂಬಿಸಿರುತ್ತದೆ. ಕಾರ್ಖಾನೆ, ವಾಣಿಜ್ಯ ಸಂಸ್ಥೆ ಹಾಗೂ ಇತರೆ ಸಂಘಸಂಸ್ಥೆಗಳಲ್ಲಿ, ಜನರನ್ನು ನೌಕರಿಗಾಗಿ ನೇಮಕ ಮಾಡುವುದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಅವರಿಗೆ ತರಬೇತಿ ನೀಡುವುದು, ಅವರು ಮಾಡುವ ಕೆಲಸಕ್ಕೆ ಸೂಕ್ತ ಸಂಬಳ ಮತ್ತು ಭತ್ಯೆಯನ್ನು ನೀಡುವುದು, ಮಾಲೀಕ ಮತ್ತು ಕಾರ್ಮಿಕರ ನಡುವೆ ಕಲಹ ರಹಿತ ಸಂಬಂಧವನ್ನು ಬೆಳೆಸುವುದು, ಕಾರ್ಮಿಕ ಕಾಯಿದೆಗಳನ್ನು ಪಾಲಿಸುವುದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಪೂರೈಸಲು ನೌಕರರ ಮನವೊಲಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾನವ ಸಂಪನ್ಮೂಲ ನಿರ್ವಹಣೆ ಎಂದು ಹೇಳಲಾಗುತ್ತದೆ.

Read More
0 Comments

ಕನ್ನಡ ಭಾಷೆಯ ಉಳಿಕೆಯ ಪಾಲುದಾರರಾಗಿ ಮಾನವ ಸಂಪನ್ಮೂಲ ಅಧಿಕಾರಿಗಳು

7/9/2018

1 Comment

 
Picture
ನವೀನ್ ನಾಯ್ಕ್
ಆಫೀಸರ್, ಮಾನವ ಸಂಪನ್ಮೂಲ ವಿಭಾಗ,
ಎಸ್ಸಿಲಾರ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈ.ಲಿ., ಬೆಂಗಳೂರು.

ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಅವಿತವ್ಯ ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು.

Read More
1 Comment

ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆ ಮತ್ತು ಪರಿಣಾಮಕಾರಿತ್ವಕ್ಕಾಗಿ ನೀತಿಕಥೆಗಳ ಬಳಕೆ

1/4/2018

1 Comment

 
Picture
ಜೆ.ಎಂ. ಸಂಪತ್
ವ್ಯವಸ್ಥಾಪಕ ನಿರ್ದೇಶಕರು ಮತ್ತು
ನಿರ್ದೇಶಕರು, ಅರ್ಪಿತಾ ಅಸೋಸಿಯೇ ಪ್ಟ್ಸ್ರೈವೇಟ್ ಲಿಮಿಟೆಡ್
Picture
ಕಲ್ಪನ ಸಂಪತ್
​ವ್ಯವಸ್ಥಾಪಕ ನಿರ್ದೇಶಕರು ಮತ್ತು
ನಿರ್ದೇಶಕರು, ಅರ್ಪಿತಾ ಅಸೋಸಿಯೇ ಪ್ಟ್ಸ್ರೈವೇಟ್ ಲಿಮಿಟೆಡ್
ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆ
ಉದ್ಯೋಗಿಗಳ ತೊಡಗಿಸಿಕೊಳ್ಳುವಿಕೆ ಎಂಬುದು ಸಾಂಸ್ಥಿಕ ಮಾನವ ಸಂಪನ್ಮೂಲ ನಿರ್ವಹಣೆಯ ವಿಭಾಗವನ್ನು ವಿಶೇಷವಾಗಿ ಲಗ್ಗೆ ಇಟ್ಟಿದೆ (ವಿಭಾಗದಲ್ಲಿ ಬಹಳವಾಗಿ ಮಿಂಚುತ್ತಿದೆ). ಶತಮಾನಗಳಷ್ಟು ಹಳೆಯದಾದ, ಪೂರ್ವದ ಪರಿಕಲ್ಪನೆಗಳಾದ ಕುಟುಂಬ (ಎಂಬ ಸಂಸ್ಥೆ), ಪರಸ್ಪರ ಸಂಬಂಧ (ಅವಲಂಬನೆ), ಪ್ರೀತಿ ಇವುಗಳನ್ನು ಬಳಸಿ ಕಾರ್ಯಸಾಧನೆ ಮತ್ತು ಸಕಾರಾತ್ಮಕ ಫಲಿತಾಂಶ ಪಡೆಯಬಹುದು ಎಂಬುದು ಇಲ್ಲಿಯ ಸಂಸ್ಕೃತಿಯ ಭಾಗವಾಗಿಯೇ ಇದೆ. ಈಗ ಇದು ಪಶ್ಚಿಮದ ಸಾಂಸ್ಥಿಕ ರೂಪರೇಷೆಗೆ ಅಳವಡಿಕೆಯಾಗುತ್ತಿರುವುದು ಹೊಸದಾಗಿ ಮತ್ತು ಆಸಕ್ತಿದಾಯಕವಾಗಿ ಕಾಣಿಸುತ್ತದೆ.


Read More
1 Comment

ಮಾನವ ಸಂಪನ್ಮೂಲ ಮಾರ್ಗದರ್ಶಿ

11/9/2017

0 Comments

 
Picture
Buy
Picture
ರಾಮ್ ಕೆ. ನವರತ್ನ
ಚೀಫ್ ಎಕ್ಸ್ ಕ್ಯೂಟಿವ್, ಹೆಚ್‍ಆರ್ ರಿಸೋನೆನ್ಸ್
ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ಸಮ್ಮೇಳನ-2017 ರ ಸಂದರ್ಭದಲ್ಲಿ ಬಿಡುಗಡೆಗೊಂಡ ಕೃತಿ
ಪೀಠಿಕೆ
ಯಾವುದೇ ಸಂಸ್ಥೆಯಲ್ಲಿ ಉದ್ಯೋಗ ಪ್ರಾರಂಭವಾದಾಗ, ಪ್ರತಿ ನೌಕರನಿಗೆ, ಆಯಾ ಸಂಸ್ಥೆಯ ಸಂಪೂರ್ಣ ಮಾಹಿತಿ ಅವನ ಕೆಲಸ ಕೆಲಸದ ರೀತಿ, ಜವಾಬ್ದಾರಿ, ಹಕ್ಕು ಬಾಧ್ಯತೆಗಳು, ಇತ್ಯಾದಿಗಳ ತಿಳುವಳಿಕೆ ನೀಡುವುದು ಅವಶ್ಯ. ನೌಕರ ಮಾನಸಿಕವಾಗಿ ಹಾಗೂ ವ್ಯಾವಹಾರಿಕವಾಗಿ ತನ್ನ ಸಂಸ್ಥೆ ಕೆಲಸದ ಜೊತೆ ಹೊಂದಿಕೊಳ್ಳುತ್ತಾನೆ. ಹಾಗೆಯೇ ಸಂಸ್ಥೆ/ ಕಂಪನಿಯ ಕೂಡ, ತನ್ನ ಗುರಿಗಳನ್ನು ಸಾಧಿಸಲು ಹಾಗೂ ನೌಕರನ ಸಂಪೂರ್ಣ ಸಾಮರ್ಥ್ಯ ಕೌಶಲ್ಯಗಳನ್ನು ಉಪಯೋಗಿಸುವ ವಾತಾವರಣ ನಿರ್ಮಾಣ ಮಾಡಬೇಕಾಗುತ್ತದೆ. ಅಲ್ಲದೆ ಇದು ಕಾನೂನಿನ ಒಂದು ಸಹಜ ಕ್ರಿಯೆ ಹಾಗೂ ಕಾರ್ಮಿಕ ಕಾನೂನಿನ ವ್ಯವಹಾರ/ ಸಂಬಂಧಿಗಳ ಭದ್ರ ಬುನಾದಿಯ ಅವಶ್ಯಕತೆಯೂ ಹೌದು. ಇದು ಯಶಸ್ವಿಯಾಗಿ, ಪರಿಣಾಮಕಾರಿ ಆಗಬೇಕಾದರೆ ನೌಕರನಿಗೆ ತನ್ನ ಸಂಸ್ಥೆಯ, ತನ್ನ ಕೆಲಸದ ರೀತಿ ನೀತಿಗಳ ಆಡಳಿತ ವೈಖರಿ ಬಗೆಗೆ ಸಂಪೂರ್ಣ ಜ್ಞಾನ ಅರಿವು ಬೇಕು. ಈ ದಿಶೆಯಲ್ಲಿ ಪ್ರಾರಂಭಿಕ ಹಂತದಲ್ಲಿ ಅವನಿಗೆ ಸಂಸ್ಥೆಯ ಪರಿಚಯ, ಧ್ಯೇಯ, ಉದ್ದೇಶ, ಗುರಿ, ಮೌಲ್ಯಗಳು, ಸುರಕ್ಷೆ, ಗುಣಮಟ್ಟ, ಪರಿಸರ ಇತ್ಯಾದಿ ನೀತಿಗಳ ಬಗ್ಗೆ, ಕಂಪನಿಯು ಹೊಂದಿರುವ ಬದ್ಧತೆ ಮತ್ತು ಜಾರಿ ಮಾಡುವ ವಿಧಾನದ ಅರಿವು ಇದ್ದರೆ ಅವನು ತಾನು ಯಶಸ್ವಿ ಉದ್ಯೋಗಿ ಆಗುವುದರ ಜೊತೆ ಕಂಪನಿಯ ಯಶಸ್ವಿಗೂ ತನ್ನ ಪಾಲಿನ ದೇಣಿಗೆ ನೀಡಲು ಸಮರ್ಥನಾಗುತ್ತಾನೆ.


Read More
0 Comments

ಮಾನವ ಸಂಪನ್ಮೂಲ (HR) ಕನ್ನಡ ಸಮ್ಮೇಳನ

9/19/2017

0 Comments

 
Picture
Picture
0 Comments

ಕೈಗಾರಿಕೆಗಳಲ್ಲಿ ಕನ್ನಡ

9/17/2017

0 Comments

 
ಪ್ರತಿ ನವೆಂಬರ್‍ನಲ್ಲಿ ಕನ್ನಡತನ ಜಾಗೃತವಾಗುವಂತೆ ಈ ಸಲವೂ ಅನೇಕ ಕೈಗಾರಿಕೆಗಳಲ್ಲಿ ಸಂಬಂಧಿಸಿದಂತೆ ಕೆಳಗಿನ ವಿಷಯಗಳನ್ನು ಗಮನಿಸುವುದು ಸೂಕ್ತ.​

Read More
0 Comments

Absenteeism

9/1/2017

0 Comments

 
absenteeism
File Size: 299 kb
File Type: pdf
Download File

0 Comments

ಜನಸಂಪದ -ಎಸ್.ವಿ. ಮಂಜುನಾಥ್

8/30/2017

1 Comment

 
Picture
Buy
ಲೇಖಕರ ಮಾತು
ಮಾನವ ಸಂಪನ್ಮೂಲ ನಿರ್ವಹಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಹೊರಬಂದಿರುವ ಪುಸ್ತಕಗಳು ವಿರಳ. ಅದರಲ್ಲೂ ವೃತ್ತಿಯಲ್ಲಿದ್ದುಕೊಂಡು ಅದರಿಂದ ಪಡೆದ ಅನುಭವಗಳನ್ನಾಧರಿಸಿದ ಹೊತ್ತಿಗೆಗಳು ಅಷ್ಟಾಗಿ ಹೊರಬಂದಿಲ್ಲ. `ಜನಸಂಪದ' ಈ ಕೊರತೆಯನ್ನು ಸ್ವಲ್ಪಮಟ್ಟಿಗಾದರೂ ನಿವಾರಿಸುತ್ತದೆಂಬುದು ನನ್ನ ಪ್ರಾಮಾಣಿಕ ಅನಿಸಿಕೆಯಾಗಿದೆ.

Read More
1 Comment
<<Previous

    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    Video


    Picture

    Inviting articles

    Inviting meaningful articles on HR and Labour Law to publish in our website 

    Submit Your article
    Human Resources And Labour Law Classes

    RSS Feed


Powered by Create your own unique website with customizable templates.
  • HOME
    • Team
  • POSH
  • Online Groups
  • Books
  • BLOG
  • Contact Us