ನಿರಾತಂಕ, ಸ್ವಯಂ ಸೇವಾ ಸಂಸ್ಥೆ ಒಂದು ದಶಕದಿಂದ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಜೀವನಾಧಾರ ತರಬೇತಿಯ ಕ್ಷೇತ್ರಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಾ ಸಮಾಜಕಾರ್ಯ ವಿಷಯದಲ್ಲಿ ತ್ರೈಮಾಸಿಕ ಪತ್ರಿಕೆಯನ್ನು ಹೊರತರುತ್ತಿದೆ ಹಾಗೂ ಸಮಾಜಕಾರ್ಯ ವಿಷಯದಲ್ಲಿ ಪುಸ್ತಕಗಳನ್ನು ಪ್ರೋತ್ಸಾಹಿಸುತ್ತಾ ನಿರುತ ಪಬ್ಲಿಕೇಷನ್ಸ್ ಅಡಿಯಲ್ಲಿ ಪ್ರಕಟಿಸುತ್ತಾ, ತನ್ನದೇಯಾದ ವಿಭಿನ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಜವಾಬ್ದಾರಿಯುತ ಸಂಸ್ಥೆಯಾಗಿದೆ. ಈವೊಂದು ಸಂಸ್ಥೆ, ಸುಮಾರು 8 ತಿಂಗಳ ಹಿಂದೆ, ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಸಮಾನ ಮನಸ್ಕರ ಜೊತೆಗೂಡಿ, `ಉಚಿತ ಮಾನವ ಸಂಪನ್ಮೂಲ ತರಗತಿಗಳನ್ನು' ಪ್ರತಿ ಭಾನುವಾರ `ಶ್ರೀ ಕನ್ಯಾಕುಮಾರಿ ವಿದ್ಯಾಸಂಸ್ಥೆ'ಯಲ್ಲಿ ಆರಂಭಿಸಿ, ಈವರೆಗೂ ಸುಮಾರು 20 ತರಗತಿಗಳನ್ನು 50 ಜನರಿಗೆ ಕಲ್ಪಿಸಿಕೊಟ್ಟಿದೆ. ಈ ತರಬೇತಿಗಳನ್ನು ವಿವಿಧ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನುರಿತ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ ಆಯೋಜಿಸಲಾಯಿತು. ಈವೊಂದು ಕಾರ್ಯವನ್ನು, ಯಾವುದೇ ವಾಣಿಜ್ಯ ಉದ್ದೇಶವಿಲ್ಲದೆ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ, ಗ್ರಾಮೀಣ ಮತ್ತು ಕನ್ನಡದ ವ್ಯಕ್ತಿಗಳು ಬೆಳೆಯಬೇಕು ಎಂಬ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿತ್ತು. ಈ ತರಗತಿಗಳಲ್ಲಿ ಭಾಗವಹಿಸಿದವರ ಸಮಸ್ಯೆಗಳನ್ನು ಕಂಡು, ಆ ಸಮಾನ ಮನಸ್ಕರೆಲ್ಲರೂ, ಕರ್ನಾಟಕದಲ್ಲಿ ಕನ್ನಡದ ಬಳಕೆಗೆ, ಕಾರ್ಖಾನೆಗಳಲ್ಲಿ ಇರುವ ತೊಂದರೆಗಳು ಮತ್ತು ಅದಕ್ಕೆ ಪರಿಹಾರಗಳು ಹಾಗೂ ಕನ್ನಡದ ವ್ಯಕ್ತಿಗಳಿಗೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಇರುವ ತೊಂದರೆಗಳ ಬಗ್ಗೆ ದೀರ್ಘವಾದ ಚರ್ಚೆಯನ್ನು ಮಾಡುತ್ತಿರುವಾಗ, ರಾಜ್ಯಮಟ್ಟದಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಪ್ರೋತ್ಸಾಹ, ಈ ನಿಟ್ಟಿನಲ್ಲಿ ಒಂದಾಗಬೇಕು ಎಂಬ ಚಿಂತನೆ ಮಾಡಿತು. ಇವರಿಂದಲೇ ಕನ್ನಡದ ಬಳಕೆ, ಉಳಿವು ಮತ್ತು ಕನ್ನಡಿಗರಿಗೆ ಅವಕಾಶಗಳ ಸೃಷ್ಟಿ ಎಂಬ ಮನವರಿಕೆಯಾಯಿತು. ತದನಂತರ, ಈ ಕುರಿತು ಕೆಲವು ಹಿರಿಯರೊಂದಿಗೆ ಕಾರ್ಯಕಾರಿ ಸಮಿತಿಯ ಸದಸ್ಯರು ದೀರ್ಘವಾದ ಮುಕ್ತ ಚರ್ಚೆಯನ್ನು ನಡೆಸಿದರು. ಈ ಚರ್ಚೆಗಳ ಬಳಿಕ, ರಾಷ್ಟ್ರಕವಿ ಕುವೆಂಪುರವರ `ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಕಾವ್ಯದ ಪ್ರೇರಣೆ ಪಡೆದು, ಸಮಾನ ಮನಸ್ಕರು ಒಂದಾಗಿ ನಿರಾತಂಕ ಸ್ವಯಂ ಸೇವಾ ಸಂಸ್ಥೆ ಮತ್ತು ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಸಮಾಜಕಾರ್ಯದ ಹೆಜ್ಜೆಗಳು ಪತ್ರಿಕೆಯ ಸಹಯೋಗದೊಂದಿಗೆ `ಪ್ರಥಮ ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ-2017'ರನ್ನು ಈ ಕೆಳಗಿನ ಉದ್ದೇಶಗಳೊಂದಿಗೆ ಆಯೋಜಿಸಲು ನಿರ್ಧರಿಸಿ, ಮಾರ್ಗದರ್ಶಕರ ಸಲಹೆಗಳಂತೆ ಈ ಕಾರ್ಯಕ್ರಮದ ರೂಪುರೇಷೆಯನ್ನು ರೂಪಿಸಲಾಗಿದೆ. ಕಾರ್ಯಕ್ರಮದ ಉದ್ದೇಶಗಳು :
ಈ ಸಮ್ಮೇಳನದ ಅಂಗವಾಗಿ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಆಹ್ವಾನಿಸಲಾಗಿದೆ. ಪ್ರಥಮ ಬಹುಮಾನ - ರೂ. 15000/- ದ್ವಿತೀಯ ಬಹುಮಾನ - ರೂ. 10000/- ತೃತೀಯ ಬಹುಮಾನ - ರೂ. 5000/- ಯುಜಿಸಿ ಯಿಂದ ಮಾನ್ಯತೆ ಪಡೆದ ಪತ್ರಿಕೆಯಲ್ಲಿ ಲೇಖನಗಳನ್ನು ಪ್ರಕಟಿಸಲಾಗುವುದು ಹಾಗೂ ISBN ನಂಬರ್‍ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 19-11-2017. ಮಾನವ ಸಂಪನ್ಮೂಲ ಕ್ಷೇತ್ರದ ವೃತ್ತಿಪರರು ಹಾಗೂ ವಿದ್ಯಾರ್ಥಿಗಳೂ ಸಹ ಲೇಖನಗಳನ್ನು ಕಳುಹಿಸಿಕೊಡಬಹುದು. ಆಯ್ಕೆಗೊಂಡ ಲೇಖನಗಳನ್ನು ಸಮ್ಮೇಳನದಲ್ಲಿ ಮಂಡಿಸಲು ಅವಕಾಶ ನೀಡಲಾಗುವುದು. ಲೇಖನಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು - [email protected] ಈ ಸಮ್ಮೇಳನಕ್ಕೆ ಹಣಕಾಸಿನ ವ್ಯವಸ್ಥೆಯನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ದೇಣಿಗೆಯ ಮೂಲಕ ಸಂಗ್ರಹಿಸಿ ಅದರ ವಿವರಗಳನ್ನು ನಿರಾತಂಕ ಸಂಸ್ಥೆಯ ಜಾಲತಾಣದಲ್ಲಿ ವೆಚ್ಚಗಳ ವಿವರಗಳೊಂದಿಗೆ ಪ್ರಕಟಿಸಲಾಗುತ್ತದೆ. ಈ ಸಮ್ಮೇಳನವನ್ನು ಯಾವುದೇ ಸಂಕುಚಿತ ಮನೋಭಾವನೆಯಿಲ್ಲದೆ, ಉನ್ನತ ಆದರ್ಶಗಳೊಂದಿಗೆ ಕರ್ನಾಟಕದಲ್ಲಿ ಕನ್ನಡ ಬಳಕೆಯ ಉತ್ತೇಜನಕ್ಕಾಗಿ ಮತ್ತು ಉನ್ನತ ಸೌಹಾರ್ದಯುತ ಸಂಬಂಧಗಳ ಬೆಳವಣಿಗೆಯನ್ನು ಸಂಸ್ಥೆಗಳಲ್ಲಿ ಬೆಳೆಸಿ, ಕಾರ್ಖಾನೆಗಳ ಅಭಿವೃದ್ಧಿಗೆ ಪೂರಕವಾಗಲೆಂದು ಆಯೋಜಿಸಲಾಗುತ್ತಿದೆ. ಈವೊಂದು ಕಾರ್ಯಕ್ರಮದಿಂದ ಯಾವುದೇ ಇತರೆ ಭಾಷೆಗಳಿಗಾಗಲಿ ಅಥವಾ ಜನಾಂಗಕ್ಕಾಗಲಿ ಧಕ್ಕೆ ತರುವಂತಹ ವಿಷಯವಿಲ್ಲದೆ, ಎಲ್ಲರನ್ನೂ ಬೆಳೆಸುವ ನಿಟ್ಟಿನಲ್ಲಿ, ಕನ್ನಡದ ಭಾಷೆಯನ್ನು ಉಳಿಸಿ, ಬೆಳೆಸುವುದಾಗಿದೆ. ಈ ಕಾರ್ಯಕ್ರಮದಿಂದ ನಾವೆಲ್ಲ ಎಚ್ಚೆತ್ತು, ನಮ್ಮ ಭಾಷೆಯನ್ನು ಮತ್ತು ಸಂಸ್ಕೃತಿಯನ್ನು ಹುರುಪುಗೊಳಿಸಿ ಅದನ್ನು ಹೊಸ ಪೀಳಿಗೆಗೆ ಎಚ್ಚರಿಕೆಯಿಂದ ರವಾನಿಸುವ ಕರ್ತವ್ಯ ನಮ್ಮದಾಗಬೇಕು ಎಂಬುದು ನಮ್ಮ ಆಶಯ. ಈ ಕಾರ್ಯಕ್ರಮ ಸಂಪೂರ್ಣ ವಿಡಿಯೋ Facebook Live ನಲ್ಲಿದೆ. ಕಾರ್ಯಕಾರಿ ಸಮಿತಿಯ ಸದಸ್ಯರು: ಡಾ. ಬಿ.ಕೆ. ಕೆಂಪೇಗೌಡ
ಡೆಪ್ಯುಟಿ ಜನರಲ್ ಮ್ಯಾನೇಜರ್ - ಹೆಚ್ಆರ್ & ಐಆರ್ (ಸದರ್ನ್ ರೀಜನ್), ಸಾಂಧಾರ್ ಟೆಕ್ನಾಲಜೀಸ್ ಲಿ. ಶ್ರೀ ಪ್ರಕಾಶ ಆರ್.ಎಂ. ಸೀನಿಯರ್ ಮ್ಯಾನೇಜರ್ - ಹೆಚ್ಆರ್, ಸ್ನೈಡರ್ ಎಲೆಕ್ಟ್ರಿಕ್ ಇಂಡಿಯಾ ಶ್ರೀ ಶೇಖರ್ ಜಿ.ಎನ್. ಡೆಪ್ಯುಟಿ ಜನರಲ್ ಮ್ಯಾನೇಜರ್ - ಹೆಚ್ಆರ್ & ಅಡ್ಮಿನ್, ಬಿಯೆಸ್ಸೆ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಪ್ರೈ. ಲಿ. ಶ್ರೀ ಜಯರಾಮ್ ಬಿ.ಆರ್. ಹೆಡ್ - ಹೆಚ್ಆರ್, ಎಸ್.ಕೆ.ಎಫ್ ಸೀಲಿಂಗ್ ಸಲ್ಯೂಷನ್ಸ್ ಶ್ರೀ ರಮೇಶ ಎಂ.ಎಚ್. ಕಾರ್ಯದರ್ಶಿ - ನಿರಾತಂಕ ಟ್ರಸ್ಟ್, ಸಂಪಾದಕರು - ಸಮಾಜಕಾರ್ಯದ ಹೆಜ್ಜೆಗಳು, ಸಂಸ್ಥಾಪಕರು - ನಿರುತ ಪಬ್ಲಿಕೇಷನ್ಸ್, ಅಧ್ಯಕ್ಷರು - ನಿರುತ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಲಿಮಿಟೆಡ್ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ನಂ. 326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು, ಡಾ. ಅಂಬೇಡ್ಕರ್ ಕಾಲೇಜು ಹತ್ತಿರ, ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು. ದೂ : 080-23213710, 9980066890 ವೆಬ್‍ಸೈಟ್ : www.niratanka.org www.socialworkfootprints.org
0 Comments
Your comment will be posted after it is approved.
Leave a Reply. |
RAMESHA NIRATANKACategories
All
Nirathanka Citizens Connect50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |