ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮ್ಮೇಳನವನ್ನು ಕರ್ನಾಟಕ ಮಾಲೀಕರ ಸಂಘ, ಎನ್‍ಐಪಿಎಂ – ಕರ್ನಾಟಕ ಚಾಪ್ಟರ್, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ, ಕರ್ನಾಟಕ ವೃತ್ತಿನಿರತರ ಸಮಾಜಕಾರ್ಯಕರ್ತರ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕನ್ನಡ ಸಮ್ಮೇಳನದಲ್ಲಿ ಸುಮಾರು 400 ಜನ ಮಾನವ ಸಂಪನ್ಮೂಲ ವೃತ್ತಿಪರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಬಿ.ಸಿ. ಪ್ರಭಾಕರ್, ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು-ಬಿ.ಸಿ.ಪಿ. ಅಸೋಸಿಯೇಟ್ಸ್, ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ ಕರಜಗಿ, ಅಧ್ಯಕ್ಷರು - ಕ್ರಿಯೇಟಿವ್ ಅಕಾಡೆಮಿ ಮತ್ತು ಅತಿಥಿಗಳಾಗಿ ಶ್ರೀ ಹನುಮಂತರಾಯಪ್ಪರವರು, ಸಂಸ್ಥಾಪಕ ಸದಸ್ಯರು, ನಿರಾತಂಕ ಮತ್ತು ಮಾಜಿ ಅಧ್ಯಕ್ಷರು - ಬಿಎಂಐಸಿಎಪಿಎ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಾಲ್ವರು ಹಿರಿಯರಿಗೆ ಮಾನವ ಸಂಪನ್ಮೂಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಹಿರಿಯರ ವಿವರ ಈ ಕೆಳಗಿನಂತಿವೆ: ಶೈಕ್ಷಣಿಕ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಪ್ರೊ. ವೈ.ಎಸ್. ಸಿದ್ದೇಗೌಡರವರು, ಉಪಕುಲಪತಿಗಳು, ತುಮಕೂರು ವಿಶ್ವವಿದ್ಯಾನಿಲಯ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಶ್ರೀ ಅಶೋಕ್ ತಮ್ಮಯ್ಯ-ನಿರ್ದೇಶಕರು, ಮಾನವ ಸಂಪನ್ಮೂಲ, ಸ್ನೈಡರ್ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಶ್ರೀ ನಾಗಭೂಷಣ ಕೆ., ಉಪಪ್ರಧಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ ಮತ್ತು ಔದ್ಯೋಗಿಕ ಸಂಬಂಧಗಳು, ಎಸ್.ಇ.ಜಿ. ಆಟೋಮೋಟಿವ್ ಶೈಕ್ಷಣಿಕ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಪ್ರಶಸ್ತಿ ಸ್ವೀಕರಿಸಿದ ಡಾ. ಕೆ. ಹೇಮಲತಾ, ಸಹ ಪ್ರಾದ್ಯಾಪಕರು, ಸಮಾಜಕಾರ್ಯ ವಿಭಾಗ, ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಭಾಷೆಯ ಬಳಕೆ, ಉಳಿವಿಕೆಗಾಗಿ ಮತ್ತು ಕಲಿಕೆಗಾಗಿ ನೀಡಿರುವ ಕೊಡುಗೆಗಾಗಿ ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿಯನ್ನು ಈ ಕೆಳಗಿನ ಸಂಸ್ಥೆಗಳಿಗೆ ನೀಡಲಾಗಿದೆ: ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತವರ್ಗ ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಬಾಷ್ ನಿಯಮಿತ ಆಡಳಿತ ವರ್ಗ ನಮ್ಮ ನಾಡು ನಮ್ಮ ಸಂಸ್ಥೆ ಪ್ರಶಸ್ತಿ ಸ್ವೀಕರಿಸಿದ ಇನ್ಫೋಸಿಸ್ ಲಿಮಿಟೆಡ್ ನ ಆಡಳಿತ ವರ್ಗ ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ 2018 ರಲ್ಲಿ ಶ್ರೀ ಶೇಖರ್ ಗಣಗಲೂರುರವರ “ಬದುಕು ಬದಲಾಯಿಸಿದ ಕಥನಗಳು” ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ಎಡದಿಂದ ಬಲಕ್ಕೆ: ರಮೇಶ ಎಂ.ಎಚ್. (ಪ್ರಕಾಶಕರು), ಹಾದಿಮನಿ (ರೇಖಾಚಿತ್ರ ವಿನ್ಯಾಸಕರು), ಶೇಖರ್ ಗಣಗಲೂರು (ಲೇಖಕರು), ಬಿ.ಸಿ. ಪ್ರಭಾಕರ್, ಹನುಮಂತರಾಯಪ್ಪ
0 Comments
Your comment will be posted after it is approved.
Leave a Reply. |
RAMESHA NIRATANKACategories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |