Nirathanka
  • HOME
  • About Us
    • TESTIMONIALS
    • Nirathanka Statutory Information
  • Corporate Social Responsibility
  • Our Services
  • HR & Employment Law Classes - Every Fortnight
  • BLOG
  • POSH (Prevention of Sexual Harassment)
  • PoSH Blog
  • BOOKS / Online Store
  • Media Mentions
  • HR Kannada Conference
  • Join Our Online Groups
  • Contact Us
  • HOME
  • About Us
    • TESTIMONIALS
    • Nirathanka Statutory Information
  • Corporate Social Responsibility
  • Our Services
  • HR & Employment Law Classes - Every Fortnight
  • BLOG
  • POSH (Prevention of Sexual Harassment)
  • PoSH Blog
  • BOOKS / Online Store
  • Media Mentions
  • HR Kannada Conference
  • Join Our Online Groups
  • Contact Us
Nirathanka

"ಇಎಸ್‍ಐ ದಾರಿ ದೀಪ" ಪುಸ್ತಕ ಬಿಡುಗಡೆ ನಿರುತ ಪಬ್ಲಿಕೇಷನ್ಸ್ ನ ವತಿಯಿಂದ ಅತಿ  ಶೀಘ್ರದಲ್ಲೇ

3/4/2018

0 Comments

 
Picture
ಎಚ್.ಎನ್. ಯಾದವಾಡ
ನಿವೃತ್ತ ಸಹ ನಿರ್ದೇಶಕರು, ಕಾರ್ಮಿಕ ಹಾಗೂ ಉದ್ಯೋಗ ಇಲಾಖೆ, ಭಾರತ ಸರಕಾರ

ಕೈಗಾರಿಕಾ ಕ್ರಾಂತಿಯ ಪರಿಣಾಮದಿಂದಾಗಿ ಜಗತ್ತಿನಾದ್ಯಂತ ಬೃಹತ್ ಪ್ರಮಾಣದಲ್ಲಿ ಕಾರ್ಖಾನೆಗಳು ಸ್ಥಾಪನೆಗೊಂಡವು. ಕೇವಲ ಬೆರಳಿಣಿಕೆಯಷ್ಟು ಜನ ಕೆಲಸ ಮಾಡುವ ಗುಡಿ ಕೈಗಾರಿಕೆಗಳಿಗೆ ಸೀಮಿತವಾಗಿದ್ದ ಉದ್ದಿಮೆಗಳು ಸಾವಿರಾರು ಕಾರ್ಮಿಕರು ಕಾರ್ಯನಿರ್ವಹಿಸುವ ಕಾರ್ಖಾನೆಗಳಾಗಿ ಪರಿವರ್ತನೆಗೊಂಡವು. ಯಂತ್ರಗಳ ಜೊತೆಗೆ ಹಗಲಿರುಳು ದುಡಿಯುವ ಲಕ್ಷ-ಲಕ್ಷ ಜನರು ತಮ್ಮ ಜೀವನವನ್ನು ತಾವು ದುಡಿಯುತ್ತಿರುವ ಉದ್ದಿಮೆಗಳ ಮಾಲೀಕರಿಗಾಗಿ ಮೀಸಲಿಟ್ಟರು. ಜಗತ್ತಿನಾದ್ಯಂತ ನಡೆದ ಈ ವಿದ್ಯಮಾನ ಭಾರತಕ್ಕೂ ಹೊರತಾಗಿರಲಿಲ್ಲ. ಅನಾಯಾಸವಾಗಿ ಈಗ ಕಾರ್ಮಿಕರ ಕುಟುಂಬದ ಸಂಪೂರ್ಣ ಜವಾಬ್ದಾರಿ ಆಯಾ ಉದ್ದಿಮೆಗಳ ಆಡಳಿತ ಮಂಡಳಿಗೆ ಸೇರಿತು. ಕಾರ್ಮಿಕರು ಕಾರ್ಯನಿರ್ವಹಿಸುತ್ತಿರುವ ಸ್ಥಳಗಳಲ್ಲಿ ಗಾಯಗೊಂಡರೆ ಅಥವಾ ದುರ್ದೈವದಿಂದ ಮರಣವನ್ನಪ್ಪಿದರೆ ಆಡಳಿತ ಮಂಡಳಿ ಸ್ವಲ್ಪ ಹಣಕಾಸು ನೆರವು ನೀಡಿ ತಮ್ಮ ಜವಾಬ್ದಾರಿಯಿಂದ ಮುಕ್ತವಾಗುತ್ತಿದ್ದುದು ಸಾಮಾನ್ಯವಾಗಿತ್ತು. ಇಂತಹ ಹೃದಯ ವಿದ್ರಾವಕ ಸಾವಿರಾರು  ಘಟನೆಗಳು ಸರ್ಕಾರದ ಗಮನಕ್ಕೆ ಬಂದವು. ಆಯಾ ಕುಟುಂಬದ ಸ್ಥಿತಿ ಚಿಂತಾಜನಕವಾಗುತ್ತಿರುವ ಸೂಕ್ಷ್ಮ ವಿಷಯವನ್ನು ಕೇಂದ್ರ ಬಿಂದುವಾಗಿ ಯೋಚಿಸಿದ ಸರ್ಕಾರ ಸಾವಿರಾರು ಕಾರ್ಮಿಕರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರುಗಳ ಹಿತರಕ್ಷಣೆಗಾಗಿ ನೌಕರರ ರಾಜ್ಯ ವಿಮಾ ನಿಗಮ ಎಂಬ ಸಾಮಾಜಿಕ ಸುರಕ್ಷಾ ಯೋಜನೆಯೊಂದನ್ನು ಜಾರಿಗೆ ತರಲಾಯಿತು. ಸ್ವತಂತ್ರ ಭಾರತದ ಮೊಟ್ಟ ಮೊದಲ ಅಧಿನಿಯಮ 1948 ಲೋಕಸಭೆಯಲ್ಲಿ ಬಹುಮತದಿಂದ ಜಾರಿಯಾಗಿದುದಕ್ಕೆ ಇತಿಹಾಸ ಸಾಕ್ಷಿಯಾಯಿತು. 
ಸ್ವತಂತ್ರ ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ ನೆಹರುರವರು 1952 ಫೆಬ್ರವರಿ 24 ರಂದು ಉತ್ತರ ಪ್ರದೇಶದ ಕಾನಪೂರದಲ್ಲಿ ಕಾರ್ಮಿಕರ ಜೀವನದಲ್ಲಿ ಬೆಳಕು ಚೆಲ್ಲುವ ಹಾಗೂ ಅವರ ಜೀವನ ಪಥವನ್ನು ಪ್ರಶಸ್ತಗೊಳಿಸುವ ಘನ ಉದ್ದೇಶಿತ ಇ.ಎಸ್.ಐ ಯೋಜನೆಗೆ ಪಂಚ ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ದೇಶದ ಆರ್ಥಿಕ ಪ್ರಗತಿಗೆ ಬೆನ್ನೆಲುಬಾಗಿರುವ ಕಾರ್ಮಿಕ ಬಂಧುಗಳಿಗೆ ಗೌರವ ಸಲ್ಲಿಸುವುದಕ್ಕಾಗಿ ಪಂಡಿತ ಜವಹರಲಾಲ ನೆಹರುರವರು ದೇಶದ ಪ್ರಥಮ ಕಾರ್ಮಿಕ ವಿಮಾದಾರರಾಗಿ ತಮ್ಮನ್ನು ತಾವು ನೋಂದಾಯಿಸಿಕೊಂಡರು. ದೇಶದ ಕೋಟಿ-ಕೋಟಿ ಕಾರ್ಮಿಕರಿಗೆ ಗೌರವ ಸಲ್ಲಿಸಿದುದು ಕೈಗಾರಿಕಾ ಇತಿಹಾಸದಲ್ಲಿ ಮೈಲುಗಲ್ಲಾಯಿತು. ಪ್ರಥಮ ಹಂತವಾಗಿ ಉತ್ತರ ಪ್ರದೇಶದ ಕಾನಪೂರ ಹಾಗೂ ದಿಲ್ಲಿಯಲ್ಲಿರುವ ಕಾರ್ಖಾನೆಗಳನ್ನು ಇ.ಎಸ್.ಐ ವ್ಯಾಪ್ತಿಗೆ ಒಳಪಡಿಸಲಾಯಿತು. ಕಾರ್ಮಿಕರಿಗಾಗಿ ಆರಂಭಿಸಲಾದ ಈ ಮಹತ್ವಾಕಾಂಕ್ಷಿ ಯೋಜನೆ ಆರು ದಶಕಗಳನ್ನು ಕಳೆದು ಏಳನೆಯ ದಶಕಕ್ಕೆ ಕಾಲಿಡಿಸಿದ ಈ ಸಾಮಾಜಿಕ ಸುರಕ್ಷಾ ಯೋಜನೆಯ ಸಿಂಹಾಲೋಕನ ಮಾಡಿದಾಗ ಯೋಜನೆಯ ರೆಂಬೆ ಕೊಂಬೆಗಳು ಎಷ್ಟೊಂದು ವಿಶಾಲವಾಗಿ ಹರಡಿಕೊಂಡಿವೆ ಎಂದರೆ, ಮೊದಲು ಕೇವಲ ಕಾರ್ಖಾನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ಸೀಮಿತವಾಗಿದ್ದ ಈ ಯೋಜನೆಯು ಇಂದು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಭೌಗೋಳಿಕವಾಗಿ ಬಹುಪಾಲು ಇಡೀ ದೇಶದಲ್ಲಿ ವಿಸ್ತಾಪಿಸಲ್ಪಟ್ಟ ಕಾರ್ಖಾನೆ, ಮಾರಾಟ ಮಳಿಗೆ, ಸಿನಿಮಾ ಮಂದಿರ, ವಸತಿ ಗೃಹ, ಮುದ್ರಣಾಲಯ ಕಟ್ಟಡ ನಿರ್ಮಾಣ, ಸಾರಿಗೆ ಸಂಸ್ಥೆಗಳೂ ಸೇರಿದಂತೆ ಖಾಸಗಿ ವೈದ್ಯಕೀಯ ಸಂಸ್ಥೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟಿತ ವಲಯದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೂ ಈ ಯೋಜನೆಯನ್ನು ವಿಸ್ತರಿಸಲಾಗಿದೆ. ದಿನಾಂಕ: 01-05-2016 ರಿಂದ ಅನ್ವಯವಾಗುವಂತೆ ಭೌಗೋಳಿಕವಾಗಿ ಸಂಪೂರ್ಣ ಕರ್ನಾಟಕ ರಾಜ್ಯವನ್ನು  ಇ.ಎಸ್.ಐ. ವ್ಯಾಪ್ತಿಗೆ ತರಲಾಗಿದೆ. ಅಂದರೆ, ಕಾರ್ಮಿಕ ದಿನಾಚರಣೆಯ ಪುನೀತ ದಿನದಂದು ಇ.ಎಸ್.ಐ ಯೋಜನೆಯನ್ನು ಇಡೀ ರಾಜ್ಯಕ್ಕೆ ಜಾರಿಗೊಳಿಸಲಾಗಿದೆ. ಹಾಗೆಯೇ ದಿನಾಂಕ:- 01-01-2017 ರಿಂದ ಅನ್ವಯವಾಗುವಂತೆ ಆಯಾ ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಸಿಕ 21000=00 ರೂಪಾಯಿ ಸಂಬಳ ಪಡೆಯುತ್ತಿರುವ ನೌಕರರು ವಿಮಾದಾರರಾಗಿ. ಇ.ಎಸ್.ಐ ಇಲಾಖೆಯ ಫಲಾನುಭವಕ್ಕೆ ಅರ್ಹರಾಗಿದ್ದಾರೆ. ಆಡಳಿತ ಮಂಡಳಿ ನೌಕರರ ಸಂಬಳದ ಶೇಕಡ 4.75% ಹಾಗೂ ನೌಕರರ ವಂತಿಗೆ ಶೇಕಡ 1.75% ಒಟ್ಟು 6.5% ವಂತಿಗೆಯನ್ನು ಪ್ರತಿ ತಿಂಗಳು ದಿನಾಂಕ 15ರ ಒಳಗಾಗಿ ಆನ್‍ಲೈನ್ ಮುಖಾಂತರ ಸಂದಾಯ ಮಾಡಬೇಕು. ವಂತಿಗೆಯನ್ನು ಸಂದಾಯ ಮಾಡುವ ಸಂಪೂರ್ಣ ಜವಾಬ್ದಾರಿ ಕಾರ್ಖಾನೆ ಮುಂತಾದ ಘಟಕ-ಸಂಸ್ಥೆಯ ಆಡಳಿತ ಮಂಡಳಿಗೆ ಸೇರಿದುದು. ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ  ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಸಿಬ್ಬಂದಿಯಿಂದ ಘೋಷಣಾ ಪತ್ರ ಭರ್ತಿ ಮಾಡಿಕೊಟ್ಟ ತಕ್ಷಣದಿಂದಲೇ ಆಡಳಿತ ಮಂಡಳಿ ಹಾಗೂ ಫಲಾನುಭವಿಗಳಾದ ವಿಮಾದಾರರು ಹಲವು ಜವಾಬ್ದಾರಿಗಳಿಂದ ಮುಕ್ತರಾಗಿ ನಿರಾಳ ಜೀವನ ನಡೆಸಲು ಅನುಕೂಲವಾಗುತ್ತದೆ. ಕಾರಣ, ಈರ್ವರ ಹಿತರಕ್ಷಣೆಯ ಜವಾಬ್ದಾರಿ ಇ.ಎಸ್.ಐ ಇಲಾಖೆಗೆ ವರ್ಗಾವಣೆಯಾಗುತ್ತದೆ. ಹೀಗಾಗಿ ಮುಷ್ಠಿಯಷ್ಟು ಬೀಜ ಚೆಲ್ಲಿ ರಾಶಿ-ರಾಶಿ ಬೆಳೆಯನ್ನು ಬೆಳೆದು ಕೊಡುವ ಅಭಯವನ್ನು ಇ.ಎಸ್.ಐ ಇಲಾಖೆ ನೀಡುತ್ತದೆ.
​
ಭಾರತ ಸರ್ಕಾರದ ಬಹು ಆಯಾಮಿ ಮಹತ್ವಾಕಾಂಕ್ಷಿಯ ಈ ಯೋಜನೆಯ ಪ್ರಮುಖ ಕೇಂದ್ರ ಬಿಂದು ವಿಮಾದಾರ. ಆದುದರಿಂದಲೇ ಇ.ಎಸ್.ಐ ಇಲಾಖೆ ಅವರನ್ನು ಗೌರವಾನ್ವಿತರು ಎಂದು ಬಣ್ಣಿಸಿದೆ. ನಗದು ಹಾಗೂ ವೈದ್ಯಕೀಯ ಹಿತಲಾಭ ನೀಡುವ ಇ.ಎಸ್.ಐ ಫಲಾನುಭವಿಗಳಾದ ನೌಕರರನ್ನು ಸುಖಕರ ಜೀವನ ಯಾಪನ ಮಾಡಲು ದೇಶದ ತುಂಬೆಲ್ಲಾ ಹರಡಿರುವ 150 ಆಸ್ಪತ್ರೆ 1403 ಚಿಕಿತ್ಸಾಲಯಗಳೂ ಸೇರಿದಂತೆ ಸಾವಿರಾರು ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗದು ರಹಿತ ಶುಶ್ರೂಷೆ ವ್ಯವಸ್ಥೆಯೊಂದಿಗೆ ವಿಮಾದಾರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಸೇವೆಯನ್ನು ನೀಡಲಾಗುತ್ತಿದೆ. ನಗದು ಫಲಾನುಭವ ನೀಡಲು ದೇಶದ ಉದ್ದಗಲಕ್ಕೆ 627 ಶಾಖಾ ಕಛೇರಿ ಹಾಗೂ 177 ಬಟವಾಡೆ ಕೇಂದ್ರಗಳ ಮುಖಾಂತರ ಕಾರ್ಯನಿರ್ವಹಿಸಲಾಗುತ್ತಿದೆ. ನೆನಪಿರಲಿ, ದಿನವೊಂದಕ್ಕೆ ರೂಪಾಯಿ-137=00 ಸಂಬಳ ಪಡೆಯುತ್ತಿರುವ ನೌಕರರಿಂದ ಯಾವುದೇ ವಂತಿಗೆಯನ್ನು ಪಡೆದುಕೊಳ್ಳದೇ ಅಂತಹ ವಿಮಾದಾರ ಹಾಗೂ ಅವನ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ಯಾವುದೇ ತಾರತ್ಯಮ್ಯವಿಲ್ಲದೇ ಸಂಪೂರ್ಣ ವೈದ್ಯಕೀಯ ಹಾಗೂ ನಗದು ಫಲಾನುಭವ ನೀಡುತ್ತಿರುವ ಹಾಗೂ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಸಾಮಾಜಿಕ ಸುರಕ್ಷಾ ಸಂಸ್ಥೆ ಎಂಬ ಹೆಗ್ಗಳಿಕೆ ಭಾರತ ಸರಕಾರ ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯದ ಇ.ಎಸ್.ಐ ಇಲಾಖೆಗೆ ಸಲ್ಲುತ್ತದೆ. ನೌಕರರ ಹಿತ ರಕ್ಷಣೆಯ ಹೊಣೆ ಹೊತ್ತ ಈ ನಿಗಮ ಅವರನ್ನು ಚಿಂತೆಯಿಂದ ಮುಕ್ತಗೊಳಿಸುವ ಅಭಯದೊಂದಿಗೆ ಅವರ ಕಷ್ಟ-ಕಾರ್ಪಣ್ಯದಲ್ಲಿ ನೆರವಾಗುವ ಹಲವು ಹನ್ನೊಂದು ಫಲಾನುಭವ ನೀಡುವ ಕಾರ್ಯಯೋಜನೆಯ ಮುಖಾಂತರ ಅವರ ಬಾಳಿಗೆ ಬೆಳಕು ನೀಡುತ್ತಿದೆ.

ಕೆಳಕಂಡ ಪ್ರಶ್ನೆಗಳ ಮಾದರಿಯಲ್ಲಿ ನೂರಾರು ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಿಸಲಾಗಿದೆ.
ಪ್ರಶ್ನೆ: ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವೇ ?

ಪ್ರಶ್ನೆ: ನೋಂದಣಿಗಾಗಿ ಯಾರನ್ನು ಸಂಪರ್ಕಿಸಬೇಕು? ನೋಂದಣಿಗಾಗಿ ನಿಗದಿತ ಶುಲ್ಕವೆಷ್ಟು?

ಪ್ರಶ್ನೆ: ನೋಂದಣಿಯ ನಂತರ ಏನು ಮಾಡಬೇಕು ? ಅಂದರೆ, ಮುಂದಿನ ಕಾರ್ಯವೇನು ?

ಪ್ರಶ್ನೆ: ಸಂಸ್ಥೆಯ ಖಾಯಂ ನೌಕರರು ಈ ವ್ಯಾಪ್ತಿಗೆ ಬರುತ್ತಾರೆ ಎಂದಾಯಿತು?

ಪ್ರಶ್ನೆ:  ನೌಕರರೂ ವಂತಿಗೆಯನ್ನು ಸಲ್ಲಿಸಬೇಕೆ ?

ಪ್ರಶ್ನೆ:  ವಂತಿಗೆಯ ಪ್ರಮಾಣವೆಷ್ಟು ?

ಪ್ರಶ್ನೆ: ವಂತಿಗೆ ಹಣವನ್ನು ಮಾಲೀಕರು ಹಾಗೂ ನೌಕರರು ಬೇರೆ ಬೇರೆಯಾಗಿ ಕಟ್ಟಬೇಕೆ ?

ಪ್ರಶ್ನೆ: ಪ್ರತಿದಿನ ರೂಪಾಯಿ 137=00 ಸಂಬಳ ಪಡೆಯುತ್ತಿರುವ ನೌಕರರಿಗೆ ಫಲಾನುಭವದಲ್ಲಿ ಇತಿ ಮಿತಿಗಳುಂಟೆ? ಯಾಕೆಂದರೆ ಅವರು ತಮ್ಮ ಪಾಲಿನ ವಂತಿಗೆಯನ್ನು ಸಲ್ಲಿಸುವುದಿಲ್ಲವಲ್ಲ ?

ಪ್ರಶ್ನೆ: ಇ.ಎಸ್.ಐ ಅಧಿನಿಯಮ 1948 ರ ಅಡಿಯಲ್ಲಿ ನೋಂದಾಯಿಲ್ಪಟ್ಟ ಘಟಕದಲ್ಲಿ ನೌಕರರ ಸಂಖ್ಯೆ 10 ಇದ್ದದು ಇದ್ದಕ್ಕಿದ್ದಂತೆ ಕಡಿಮೆಯಾದ ತಕ್ಷಣ ನೊಂದಣಿ ರದ್ದಾಗುತ್ತದೆಯೆ ?

ಪ್ರಶ್ನೆ: ಅಂದರೆ, ನೋಂದಣಿಯು ಯಾವುದೇ ಸಂದರ್ಭದಲ್ಲಿ ರದ್ದಾಗುವುದಿಲ್ಲ ಎಂದಾಯಿತು ಅಲ್ಲವೇ ?

ಪ್ರಶ್ನೆ: ಸಂಘಟಿತ ವಲಯದ ಘಟಕವೊಂದು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯಲು ಸಾಧ್ಯವಿದೆಯೇ ? ಅಂದರೆ, ವ್ಯಾಪ್ತಿಯಿಂದ ಹೊರಗೆ ಹೋಗಲು ಅವಕಾಶವಿದೆಯೇ?

ಪ್ರಶ್ನೆ: ವಂತಿಗೆಯ ಪ್ರಶ್ನೆ ಬಂದಾಗ ನೌಕರರ ಯಾವ ಸಂಬಳವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು? ಅಂದರೆ, ಇ.ಎಸ್.ಐ ಇಲಾಖೆಯ ಪ್ರಕಾರ ಸಂಬಳವೆಂದರೆ ಏನು?

ಪ್ರಶ್ನೆ: ನೀವೇ ಹೇಳಿದಂತೆ ಜನವರಿ 2017 ರಿಂದ ಇ.ಎಸ್.ಐ ವೇತನದ ಮಿತಿಯನ್ನು ಮಾಸಿಕ 21000=00 ರೂಪಾಯಿಗೆ ಹೆಚ್ಚಿಸಿದೆ. ಇಲ್ಲೊಂದು ಉಪ ಪ್ರಶ್ನೆ ನೌಕರನೊಬ್ಬ ಪಡೆಯುತ್ತಿರುವ ವೇತನವು ವೇತನ ವೃದ್ಧಿ, ಬೋನಸ್, ಅಧಿಕ ಕಾರ್ಯ ನಿರ್ವಹಿಸಿದುದಕ್ಕಾಗಿ ಪಡೆದ ಹಣವೂ ಸೇರಿ ತಿಂಗಳ ಒಂದರಲ್ಲಿ 21000=00 ರೂಪಾಯಿಗಿಂತ ಹೆಚ್ಚಾಗಿ ಬಿಟ್ಟರೆ, ಅಂತಹ ಸಂದರ್ಭದಲ್ಲಿ ವಿಮಾದಾರ ನೌಕರರು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಉಳಿಯುತ್ತಾರೆಯೆ?
​
ಪ್ರಶ್ನೆ: ಅಧಿಕ ಭತ್ತೆಯನ್ನು ಸೇರಿಸಿ ವೇತನ ಮಿತಿಯು ಅಧಿಕವಾದರೆ ನೌಕರನು ಇ.ಎಸ್.ಐ ವ್ಯಾಪ್ತಿಯಿಂದ ಹೊರಗೆ ಬರುವನೆ?
ಈ ಪುಸ್ತಕವು ಪ್ರಶ್ನೋತ್ತರ ರೂಪದಲ್ಲಿದೆ. ಕಾರ್ಮಿಕರಿಗೆ ಹಾಗೂ ಹೆಚ್‍ಆರ್ ವೃತ್ತಿನಿರತರಿಗೆ ಅತ್ಯಂತ ಉಪಯುಕ್ತವಾಗಿದೆ. ಪುಸ್ತಕಗಳನ್ನು ಈಗಿನಿಂದಲೇ ಕಾಯ್ದಿರಿಸಬಹುದು. ಪುಸ್ತಕದ ಬೆಲೆ : ರೂ. 150/-

ನಿರುತ ಪ್ರಕಾಶನ
#326, 1ನೇ ಮಹಡಿ, ಸಿಂಡಿಕೇಟ್ ಬ್ಯಾಂಕ್ ಎದುರು,
ಡಾ. ಅಂಬೇಡ್ಕರ್ ಕಾಲೇಜು ಹತ್ತಿರ,
​ಕೆಂಗುಂಟೆ, ಮಲ್ಲತ್ತಹಳ್ಳಿ, ಬೆಂಗಳೂರು-560056

ದೂ : 080-23213710

0 Comments

Your comment will be posted after it is approved.


Leave a Reply.


    Categories

    All
    CSR
    HR Training Classes
    HR ಕನ್ನಡ ಲೇಖನಗಳು
    Human Resources
    Interview
    Labour Law Books
    Labour Laws
    Others
    PoSH


    Niratanka

    Picture

    MHR LEARNING ACADEMY

    Get it on Google Play store
    Download App
    Online Courses

    Picture
    Know More

    Picture
    Know More

    Picture
    Know More

    Picture
    Know More

    Picture
    Know More

    Picture
    50,000 HR PROFESSIONALS ARE CONNECTED THROUGH OUR NIRATHANKA HR GROUPS.
    YOU CAN ALSO JOIN AND PARTICIPATE IN OUR GROUP DISCUSSIONS.
    Join Now

    RSS Feed


site MAP


SITE

  • ​HOME
  • ABOUT US
  • ​BLOG
  • ​COLLABORATE WITH NIRATHANKA
  • ​​CONTACT US

Services

  • COUNSELLING
  • CORPORATE SOCIAL RESPONSIBILITY
  • TREE PLANTATION PROJECT
  • AWARENESS PROGRAMME
  • RURAL AND COMMUNITY DEVELOPMENT

POSH

  • POSH
  • POSH CLIENTS
  • POSH BLOG
  • INTERNAL COMMITTEE
  • OUR ASSOCIATES

HR Kannada Conference

  • HR KANNADA CONFERENCE​​

Nirathanka CITIZENS CONNECT

  • NIRATHANKA CITIZENS CONNECT

JOB

  • ​JOB PORTAL

TRAINING

  • TRAINING PROGRAMMES​
  • ​HR AND LABOUR LAW CLASSES

PUBLICATIONS

  • LEADER'S TALK​
  • ​TRANSLATION & TYPING

OUR OTHER WEBSITES

  • WWW.NIRUTAPUBLICATIONS.ORG
  • ​WWW.HRKANCON.COM

SUBSCRIBE


Picture
For More Details
Copyright Nirathanka 2021, Website Designing & Developed by: www.mhrspl.com
  • HOME
  • About Us
    • TESTIMONIALS
    • Nirathanka Statutory Information
  • Corporate Social Responsibility
  • Our Services
  • HR & Employment Law Classes - Every Fortnight
  • BLOG
  • POSH (Prevention of Sexual Harassment)
  • PoSH Blog
  • BOOKS / Online Store
  • Media Mentions
  • HR Kannada Conference
  • Join Our Online Groups
  • Contact Us