ಜಾಗತೀಕರಣದ ಪ್ರಭಾವದಿಂದ ಮಾನವ ಸಂಪನ್ಮೂಲ ವಿಭಾಗದ ಉಗಮ ಎಂಬ ಅಭಿಪ್ರಾಯ ಇಂದು ಎಲ್ಲರಲ್ಲಿಯೂ ಮನೆಮಾತಾಗಿರುವುದು ಸತ್ಯವಾಗಿರುವುದಷ್ಟೇ ಅಲ್ಲದೇ ಈ ವಿಭಾಗವು ಹೊರ ರಾಷ್ಟ್ರಗಳು ಭಾರತಕ್ಕೆ ಮತ್ತು ಭಾರತದ ಕೈಗಾರಿಕಾ ಬೆಳವಣಿಗೆಗೆ, ನೀಡಿದ ಕೊಡುಗೆಯಾಗಿದೆ ಎಂಬುದು ಹಾಸ್ಯಾಸ್ಪದವೇ ಸರಿ. ಕಾರಣ ಈ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪರಿಕಲ್ಪನೆಗಳಾದ Organisational values, Diversity, Performance Management, Training and Development, People transformation, Problem solving, Communication etc., ಮುಂತಾದವುಗಳ ಉಲ್ಲೇಖ ಅಷ್ಟೇ ಅಲ್ಲದೆ ಈ ವಿಷಯಗಳಲ್ಲಿನ ಪರಿಪೂರ್ಣ ಪರಿಕಲ್ಪನೆಗಳನ್ನು ಸರಿಸುಮಾರು 1200 ವರ್ಷಗಳನ್ನು ಹಿಂದೆಯೇ ನಮ್ಮ ಕನ್ನಡ ಸಾಹಿತ್ಯದಲ್ಲಿ, ಅದರಲ್ಲಿಯೂ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ತೀಚೆಗೆ ಬಂದಂತಹ ಡಿ.ವಿ.ಜಿ. ಯವರ ಕಗ್ಗದಂತಹ ಸಾಹಿತ್ಯ ಪ್ರಕಾರಗಳಲ್ಲಿ ಕಾಣಬಹುದಾಗಿದೆ.
ಈ ದೃಷ್ಟಿಯಿಂದ, ಮಾನವ ಸಂಪನ್ಮೂಲ ಪರಿಕಲ್ಪನೆಗಳನ್ನು, ಭಾರತ ಅನ್ಯ ರಾಷ್ಟ್ರಗಳಿಗೆ ಎರವಲಾಗಿ ನೀಡಿದೆ ಎಂಬುದು ಕಟು ಸತ್ಯವೇ ಹೊರತು, ಈ ಪರಿಕಲ್ಪನೆ ಹೊರ ರಾಷ್ಟ್ರದಿಂದ ನಮ್ಮ ರಾಷ್ಟ್ರಕ್ಕೆ ಬಂದ ವಿಚಾರವಲ್ಲ. ಈ ಕಟು ಸತ್ಯವನ್ನು ನಾವು ಅಂದರೆ, “So called HR Professionals”, ಜಗತ್ತಿಗೆ ಬಹಳ ಸ್ಪಷ್ಟವಾಗಿ ತಿಳಿಸದೇ ಹೋದಲ್ಲಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕರಗಳನ್ನು ಅಧ್ಯಯನ ಮಾಡದೇ ಹೋದಲ್ಲಿ ನಮಗೆ ನಾವೇ ದ್ರೋಹ ಬಗೆದುಕೊಂಡಂತಾಗುತ್ತದೆ. ಈ ದಿಶೆಯಲ್ಲಿ “ಕನ್ನಡ ಸಾಹಿತ್ಯ ಮತ್ತು ಆಧುನಿಕ ಮಾನವ ಸಂಪನ್ಮೂಲ ವಿಭಾಗದ ಸಂಪೂರ್ಣ ಅಭ್ಯುದಯ, ಒಂದು ತುಲನಾತ್ಮಕ ಅಧ್ಯಯನ”ದ ಅವಶ್ಯಕತೆ ಬಹಳವಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ನಾಗಭೂಷಣ್ Dy. General Manager - HR & IR, SEG Automotive (BOSCH Ltd.,)
2 Comments
ಗಂಗಾಧರ ರೆಡ್ಡಿ ಎನ್
10/3/2018 02:44:07 am
ನಿಜ ಸರ್.. ಎಲ್ಲ ವೃತ್ತಿಗಳಿಗೆ ಬೇಕಾದ ಸಾಹಿತ್ಯ ನಮ್ಮಲ್ಲೇ ಇದೆ ಆದರೆ ಅದನ್ನು ಹೆಕ್ಕಿ ತೆಗೆದು ಇಂದಿನ ವೃತ್ತಿಪರರಿಗೆ ಹಾಗೂ ಪ್ರಶಿಕ್ಷಣಾರ್ಥಿಗಳಿಗೆ ಒದಗಿಸುವಲ್ಲಿ ಅಕ್ಷರಶಃ ನಾವು ವಿಫಲವಾಗಿದ್ದೇವೆ. ವಿಫುಲವಾಗಿರುವ ಹೇರಳ ಸಾಹಿತ್ಯವನ್ನು ಪ್ರಸ್ತುತ ವೃತ್ತಿಪರರಿಗೆ ಹಾಗೂ ಪ್ರಶಿಕ್ಷಣಾರ್ಥಿಗಳಾಧಿಯಾಗಿ ಪ್ರಶಿಕ್ಷಕರಿಗೆ ಒದಗಿಸಲೂ ಎಡವಿದ್ದೇವೆ. ಭವಿಷ್ಯದಲ್ಲಿ ಹಾಗಾಗಬಾರದು ಎಂದರೆ, ಪ್ರತಿಯೊಬ್ಬ ವೃತ್ತಿಪರ ಮಾನವ ಸಂಪನ್ಮೂಲ ಅಧಿಕಾರಿ ತನ್ನ ಅನುಭವಗಳನ್ನು ಅಕ್ಷರ ರೂಪದಲ್ಲಿ ಹೊರತರಬೇಕಿದೆ.
Reply
PRAKASH BHAT
10/3/2018 07:21:45 am
Nice Article
Reply
Your comment will be posted after it is approved.
Leave a Reply. |
RAMESHA NIRATANKACategories
All
Stay updated and informed by joining our WhatsApp group for HR and Employment Law Classes - Every Fortnight. The Zoom link for the sessions will be shared directly in the group.
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |