ಈಗಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ, ಸಂಬಂಧಗಳು ಇಂಟರ್‍ನೆಟ್ ನ ಸ್ಪೀಡ್ ಗೆ ಒಳಗಾಗಿ, ಭಾವನೆಗಳು ಮತ್ತು ಮೌಲ್ಯಗಳು ನಶಿಸುತ್ತಿರುವುದು ವಿಷಾದನೀಯ. ಇಂತಹ ದುಸ್ಥಿತಿಯಲ್ಲಿನ ನಾವು ಸಂಬಂಧಗಳ ಕಾಪಾಡಿ, ಸಮಾಜ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜಕಾರ್ಯಕರ್ತರ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳ ಪಾತ್ರ ಗಣನೀಯ. ಇದಕ್ಕೆ ಪೂರಕವಾಗಿ, ನಮ್ಮೆಲ್ಲರ ಮನಗಳಿಗೆ ಸಂಬಂಧಗಳ ಮಹತ್ವ ತಿಳಿಸುವ ಚಿತ್ರ ಮರಳಿ ಮನೆಗೆ. ಈ ಚಿತ್ರದ ವೀಕ್ಷಣೆಯನ್ನು ದಿನಾಂಕ: (ಅತಿ ಶೀಘ್ರದಲ್ಲೇ), NMS ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಚಿತ್ರದ ವೀಕ್ಷಣೆಯ ನಂತರ, ನಿರ್ದೇಶಕರಾದ ಶ್ರೀ ಯೋಗೇಶ್ ಮಾಸ್ಟರ್ ರವರೊಂದಿಗೆ ಸಂವಾದವಿರುತ್ತದೆ. ಈವೊಂದು ಕಾರ್ಯಕ್ರಮದಲ್ಲಿ, ತಾವುಗಳು ಭಾಗಿಯಾಗಿ ಸಂಬಂಧಗಳ ಉಳಿಸಿ, ಬೆಳೆಸಲು ಸಹಕಾರ ಮಾಡಬೇಕಾಗಿ ವಿನಮ್ರ ವಿನಂತಿ. ಈ ಚಲನಚಿತ್ರ ನೋಡಲು ಆಸಕ್ತಿ ಇರುವವರು ಮೊದಲೇ ತಮ್ಮ ಹೆಸರು ಹಾಗೂ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬೇಕು.
0 Comments
Your comment will be posted after it is approved.
Leave a Reply. |
RAMESHA NIRATANKACategories
All
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |