ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ9/8/2022 ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಕಂಪನಿಯ ಮಾಲೀಕರ ಗಮನಕ್ಕೆ ತಾರದೇ, ಮತ್ತೊಂದು ಕಂಪನಿಯಲ್ಲಿ ಉದ್ಯೋಗ ಮಾಡುವುದನ್ನು ‘ಮೂನ್‌ಲೈಟಿಂಗ್’ ಎನ್ನುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಉದ್ಯೋಗಗಳನ್ನು ಮಾಡುವುದು. ವ್ಯಕ್ತಿಯೊಬ್ಬ ಹಗಲಿನ ವೇಳೆ(ಕಚೇರಿ ಸಮಯದಲ್ಲಿ) ಮೂಲ ಕಂಪನಿಯಲ್ಲಿ ಕೆಲಸ ಮಾಡುತ್ತಾ, ರಾತ್ರಿ ವೇಳೆ ಅಥವಾ ವಾರಾಂತ್ಯದಲ್ಲಿ ಮತ್ತೊಂದು ಕಡೆ ಕೆಲಸ ಮಾಡುತ್ತಾನೆ. ಇದಕ್ಕೆ ‘ಮೂನ್‌ಲೈಟಿಂಗ್’ ಎಂದು ಕರೆಯಲಾಗುತ್ತದೆ. ಅಮೆರಿಕನ್ನರು ಹೆಚ್ಚುವರಿ ಆದಾಯಕ್ಕಾಗಿ ತಮ್ಮ ನಿಯಮಿತ ವಾದ (ಬೆಳಿಗ್ಗೆ 9 ರಿಂದ ಸಂಜೆ 5ರವರೆಗಿನ) ಉದ್ಯೋಗದ ಜೊತೆಗೆ, ಹೆಚ್ಚುವರಿಯಾಗಿ ಎರಡನೇ ಉದ್ಯೋಗವನ್ನು ಆಶ್ರಯಿಸುವ ಹಿನ್ನೆಲೆಯಲ್ಲಿ ಈ ಪರಿಭಾಷೆಯು ಬೆಳಕಿಗೆ ಬಂದಿದೆ. ಭಾರತದಲ್ಲಿ ಮೂನ್‌ಲೈಟಿಂಗ್ ಕಾನೂನುಬಾಹಿರವೇ ? * ಕೈಗಾರಿಕಾ ಕಾಯ್ದೆ ಪ್ರಕಾರ ಮೂನ್‌ಲೈಟಿಂಗ್ ಅಥವಾ ಏಕಕಾಲಕ್ಕೆ ಎರಡು ಕಂಪನಿಗಳಲ್ಲಿ ಉದ್ಯೋಗ ಮಾಡುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಆದಾಗ್ಯೂ, ಕೆಲವು ರಾಜ್ಯಗಳಲ್ಲಿ ಐಟಿ ಕಂಪನಿಗಳು ಆ ನಿಯಮದಿಂದ ವಿನಾಯಿತಿ ಪಡೆದಿವೆ. * ಭಾರತದಲ್ಲಿ ಮೂನ್‌ಲೈಟಿಂಗ್ ಎನ್ನವುದು ಉದ್ಯೋಗದಾತರ ಇಚ್ಛೆಯನ್ನು ಅವಲಂಬಿಸಿದೆ. ಈ ನೀತಿಗೆ ಸಂಬಂಧಿಸಿದಂತೆ ಯಾವುದೇ ನಿಖರ ಕಾನೂನು ಇಲ್ಲ. ಆದರೂ, ವ್ಯಕ್ತಿಯೊಬ್ಬ ಏಕಕಾಲಕ್ಕೆ ಎರಡು ಕೆಲಸಗಳನ್ನು ಮಾಡುತ್ತಿದ್ದರೆ, ಕಂಪನಿಯು, ‘ಉದ್ಯೋಗದ ಒಪ್ಪಂದ’ದಲ್ಲಿ ಮಾಡಿಕೊಂಡ ಗೌಪ್ಯತೆಯ ಉಲ್ಲಂಘನೆಯ ಕಾರಣ ನೀಡಿ, ಆತನಿಗೆ ಇತರೆಡೆ ಕೆಲಸ ನಿರ್ವಹಿಸದಂತೆ ತಡೆ ಹಿಡಿಯಬಹುದು. ಈ ಹಿನ್ನೆಲೆಯಲ್ಲಿ ವ್ಯಕ್ತಿಯು ಉದ್ಯೋಗಕ್ಕೆ ಸೇರುವ ಮೊದಲು ಅಥವಾ ವ್ಯವಹಾರ ಆರಂಭಿಸುವ ಮೊದಲು ಇಂಥ ಗೊಂದಲಗಳನ್ನು ನಿವಾರಿಸಿಕೊಂಡೆ ಮುಂದಕ್ಕೆ ಹೆಜ್ಜೆ ಇಡಬೇಕು. * ‘ಉದ್ಯೋಗದ ಒಪ್ಪಂದ’ದಲ್ಲಿ ನೌಕರನು ಒಂದೇ ಉದ್ಯೋಗ ಮಾಡಬೇಕೆಂಬ ನಿಯಮವಿದ್ದರೆ, ಆಗ ನೌಕರನು ಇತರ ಕಂಪನಿಗಳಲ್ಲಿ ಕೆಲಸ ಮಾಡುವಂತಿಲ್ಲ. ಒಂದೊಮ್ಮೆ ಆ ನಿಯಮ ಉಲ್ಲಂಘಿಸಿ ಕೆಲಸ ಮಾಡಿದರೆ ಅದನ್ನು ವಂಚನೆ ಎಂದು ಪರಿಗಣಿಸಲಾಗುತ್ತದೆ. ಸಾಧಾರಣವಾಗಿ ಹೆಚ್ಚಿನ ಉದ್ಯೋಗ ಒಪ್ಪಂದಗಳು ಇದೇ ರೀತಿಯ ನಿಯಮವನ್ನು ಹೊಂದಿರುತ್ತವೆ. * ಉದ್ಯೋಗ ಒಪ್ಪಂದಗಳಲ್ಲಿ ಅಂತಹ ಷರತ್ತುಗಳಿಲ್ಲದಿದ್ದರೆ ಅಥವಾ ನಿಯಮ ಸಡಿಲಿಕೆಗೆ ಅವಕಾಶವಿದ್ದರೆ ಮೂನ್‌ಲೈಟಿಂಗ್ ಅನ್ನು ಮೋಸ ಎಂದು ಪರಿಗಣಿಸಲಾಗುವುದಿಲ್ಲ. ’ಮೂನ್‌ಲೈಟಿಂಗ್’ – ಅಭಿಪ್ರಾಯಗಳು * ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮೂನ್‌ಲೈಟಿಂಗ್ ಅನ್ನು 'ಮೋಸದ ಕೆಲಸʼ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. * ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ’ಮೂನ್‌ಲೈಟಿಂಗ್’ ಮೋಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕೆಲಸಗಾರನು ತನ್ನ ಅಧಿಕೃತ ಕೆಲಸದ ಸಮಯದ ನಂತರವೇ ತನ್ನ ಆಸಕ್ತಿಯ ಇತರ ಕೆಲಸವನ್ನು ಮಾಡುತ್ತಾನೆ. ಆತ ತಾನು ಬಯಸಿ ದ್ದನ್ನು ಮಾಡಲು ಅರ್ಹನಾಗಿದ್ದು. ಅದು ಆತನ ಸ್ವಾತಂತ್ರ್ಯ’ ಎಂದು ಹೇಳಿದ್ದಾರೆ. * ಟಾಟಾ ಕನ್ಸಲ್ಟೆನ್ಸಿ ಸಿಇಒ ಎನ್.ಗಣಪತಿ ಸುಬ್ರಹ್ಮಣ್ಯಂ ಇದನ್ನು ’ನೈತಿಕ ಸಮಸ್ಯೆ’ ಎಂದು ಪರಿಗಣಿಸಿದ್ದಾರೆ. * ಟೆಕ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಸಿಪಿ ಗುರ್ನಾನಿ ’ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲಿದೆ‘ ಎಂದು ಹೇಳಿಕೊಂಡಿದ್ದಾರೆ. ‘ನೌಕರರಿಗೆ ಏಕಕಾಲದಲ್ಲಿ ಬಹು ಉದ್ಯೋಗಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಆದರೆ ಆ ಉದ್ಯೋಗಿಗಳು ಮೂಲ ಕಂಪನಿಯೊಂದಿಗೆ ತಾವು ಮಾಡುತ್ತಿರುವ ಎರಡನೇ ಉದ್ಯೋಗದ ಕುರಿತು ಮುಕ್ತವಾಗಿರಬೇಕು. ಹೆಚ್ಚುವರಿ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು‘ ಎಂಬ ಅಂಶವನ್ನು ನೀತಿಯಲ್ಲಿ ಅಳವಡಿಸಲಾಗುತ್ತದೆ‘ ಎಂದು ಹೇಳಿದ್ದಾರೆ. ಮೂನ್‌ಲೈಟಿಂಗ್’ – ಅಭಿಪ್ರಾಯಗಳು * ವಿಪ್ರೊ ಅಧ್ಯಕ್ಷ ರಿಷಾದ್ ಪ್ರೇಮ್‌ಜಿ ಮೂನ್‌ಲೈಟಿಂಗ್ ಅನ್ನು ‘ಮೋಸದ ಕೆಲಸ’ ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ. * ಇನ್ಫೋಸಿಸ್ ಮಾಜಿ ನಿರ್ದೇಶಕ ಮೋಹನ್‌ದಾಸ್ ಪೈ ಅವರು ‘ಮೂನ್‌ಲೈಟಿಂಗ್’ ಮೋಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ‘ಕೆಲಸಗಾರನು ತನ್ನ ಅಧಿಕೃತ ಕೆಲಸದ ಸಮಯದ ನಂತರವೇ ತನ್ನ ಆಸಕ್ತಿಯ ಇತರ ಕೆಲಸವನ್ನು ಮಾಡುತ್ತಾನೆ. ಆತ ತಾನು ಬಯಸಿದ್ದನ್ನು ಮಾಡಲು ಅರ್ಹನಾಗಿದ್ದು. ಅದು ಆತನ ಸ್ವಾತಂತ್ರ್ಯ’ ಎಂದು ಹೇಳಿದ್ದಾರೆ. * ಟಾಟಾ ಕನ್ಸಲ್ಟೆನ್ಸಿ ಸಿಇಒ ಎನ್.ಗಣಪತಿ ಸುಬ್ರಹ್ಮಣ್ಯಂ ಇದನ್ನು ‘ನೈತಿಕ ಸಮಸ್ಯೆ’ ಎಂದು ಪರಿಗಣಿಸಿದ್ದಾರೆ. * ಟೆಕ್ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಸಿಪಿ ಗುರ್ನಾನಿ ‘ನಮ್ಮ ಸಂಸ್ಥೆ ಈ ನಿಟ್ಟಿನಲ್ಲಿ ಒಂದು ನೀತಿ ರೂಪಿಸಲಿದೆ’ ಎಂದು ಹೇಳಿಕೊಂಡಿದ್ದಾರೆ. ‘ನೌಕರರಿಗೆ ಏಕಕಾಲದಲ್ಲಿ ಬಹು ಉದ್ಯೋಗಗಳನ್ನು ಮುಂದುವರಿಸಲು ಅವಕಾಶ ನೀಡಬೇಕು. ಆದರೆ ಆ ಉದ್ಯೋಗಿಗಳು ಮೂಲ ಕಂಪನಿಯೊಂದಿಗೆ ತಾವು ಮಾಡುತ್ತಿರುವ ಎರಡನೇ ಉದ್ಯೋಗದ ಕುರಿತು ಮುಕ್ತವಾಗಿರಬೇಕು. ಹೆಚ್ಚುವರಿ ಉದ್ಯೋಗದ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು’ ಎಂಬ ಅಂಶವನ್ನು ನೀತಿಯಲ್ಲಿ ಅಳವಡಿಸಲಾಗುತ್ತದೆ‘ ಎಂದು ಹೇಳಿದ್ದಾರೆ. Courtecy : Prajavaani
0 Comments
Your comment will be posted after it is approved.
Leave a Reply. |
RAMESHA NIRATANKACategories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |