ಶ್ರೀಯುತ ಎಸ್.ಎನ್. ಮೂರ್ತಿ ರವರು ಹಿರಿಯ ವಕೀಲರು ಮತ್ತು ಒಬ್ಬ ದಾರ್ಶನಿಕ ವಕೀಲರಾಗಿದ್ದು, 50 ವರ್ಷದ ಸುದೀರ್ಘ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿದ್ದಾರೆ. ಇವರು ಭಾರತದಾದ್ಯಂತ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳು ಸೇರಿದಂತೆ ಹಲವಾರು ಗೌರವಾನ್ವಿತ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ವಿಶ್ವಾಸಾರ್ಹ ಕಾನೂನು ಸಲಹೆಗಾರರಾಗಿದ್ದಾರೆ. ಎಂತಹದ್ದೇ ಸಂಕೀರ್ಣ ಸಮಸ್ಯೆಗಳನ್ನು ಅತೀ ನಾಜೂಕಾಗಿ ಬಗೆಹರಿಸುವ ಇವರ ಕಾರ್ಯಕ್ಷಮತೆಯನ್ನು ನಾವು ಮೆಚ್ಚಲೇಬೇಕು. ನಿರಾತಂಕ ಸಂಸ್ಥೆಯು ಸುಮಾರು 6 ವರ್ಷದಿಂದ ನಡೆಸುತ್ತ ಬಂದಿರುವ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನಕ್ಕೆ ಇವರು ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇವರ ಜೊತೆಗಿನ ಒಡನಾಟವು ನಮಗೆ ಅತ್ಯಂತ ಆನಂದವನ್ನು ತಂದುಕೊಟ್ಟಿದೆ. ಇವರ ಮಾರ್ಗದರ್ಶನದಿಂದ ನಾವು ಎಷ್ಟೋ ವಿಷಯಗಳನ್ನು ತಿಳಿದುಕೊಂಡಿದ್ದು ಉತ್ತಮ ಬೆಳವಣಿಗೆಯನ್ನು ಕಂಡಿದ್ದೇವೆ. ಸದಾ ಹಸನ್ಮುಖಿಯಾಗಿ, ಉತ್ಸಾಹ ತುಂಬಿಕೊಂಡು ಪ್ರತಿ ಕಾರ್ಯಕ್ರಮದ ಬೆರಗನ್ನು ಹೆಚ್ಚಿಸುವಂತಹ ವ್ಯಕ್ತಿತ್ವವನ್ನು ಶ್ರೀ ಎಸ್.ಎನ್. ಮೂರ್ತಿ ರವರು ತಮ್ಮದಾಗಿಸಿಕೊಂಡಿದ್ದಾರೆ. ಇಂತಹ ಅನುಭವಿ ಮತ್ತು ಉತ್ತಮ ಜ್ಞಾನವುಳ್ಳ ವ್ಯಕ್ತಿ ನಮ್ಮ ಜೊತೆಗಿರುವುದೇ ಒಂದು ಹೆಮ್ಮೆಯ ಸಂಗತಿ.
ಇವರು 50 ವರ್ಷವನ್ನು ತಮ್ಮ ವೃತ್ತಿಯಲ್ಲಿ ನಿರ್ವಹಿಸಿದ್ದು ಉತ್ತಮ ಬೆಳವಣಿಗೆ ಮತ್ತು ಸಮಾಜದಲ್ಲಿ ಉನ್ನತ ಮಟ್ಟದ ಹೆಸರು ಮಾಡುವ ಮುಖಾಂತರ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಶ್ರೀ ಎಸ್.ಎನ್. ಮೂರ್ತಿ ರವರು ನೂರು ವರ್ಷಗಳ ಕಾಲ ಹೀಗೆ ಆರೋಗ್ಯ ಮತ್ತು ಚೈತನ್ಯದಿಂದ ನಮ್ಮಂತಹ ಹಲವಾರು ಸಂಘ ಸಂಸ್ಥೆಗಳಿಗೆ, ಯುವಕರಿಗೆ ಮಾರ್ಗದರ್ಶನವನ್ನು ನೀಡಲಿ ಎಂದು ನಾನು ಹಾರೈಸುತ್ತೇನೆ. ರಮೇಶ್ ನಿರಾತಂಕ
0 Comments
Your comment will be posted after it is approved.
Leave a Reply. |
RAMESHA NIRATANKACategories
All
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |