ಮುನ್ನುಡಿ ಅನೇಕ ವರ್ಷಗಳಿಂದ ನನ್ನ ಮನದಾಳದಲ್ಲಿ ಆಂತರಿಕ ವಿಚಾರಣೆಯ ಬಗ್ಗೆ ಒಂದು ಕಿರು ಹೊತ್ತಿಗೆ ತರುವ ವಿಚಾರ ಇದ್ದರೂ ಅದು ಮೊಳೆತದ್ದು ಈಗ. ಇತ್ತೀಚಿಗಂತೂ ಅನೇಕ ನೌಕರರು, ಸಂಸ್ಥೆಗಳು ನನ್ನನ್ನು ಸಂಪರ್ಕಿಸಿ ಈ ವಿಷಯದಲ್ಲಿ ಸಲಹೆ, ಸೂಚನೆ ಹಾಗೂ ತರ್ಜುಮೆಗಳಿಗೆ ಕೇಳುತ್ತಿದ್ದು ಇದರ ಬಗ್ಗೆ ಚಿಕ್ಕ ಕೃತಿ ಹೊರತರಲೇಬೇಕೆಂದು ಪಣತೊಟ್ಟು ಹನ್ನೆರಡು ತಿಂಗಳಿನಿಂದ ಕಾರ್ಯೋನ್ಮುಖನಾಗಿ ಈ ಕೃತಿಯನ್ನು ತಂದಿದ್ದೇನೆ. ನನ್ನ ಅರಿವಿಗೆ ಬಂದಂತೆ ಕನ್ನಡದಲ್ಲಿ ಈ ತರಹದ ಕೃತಿ, ಸಾಹಿತ್ಯ ಕಂಡಿಲ್ಲ ಅಥವಾ ನನ್ನ ದೃಷ್ಟಿಗೆ ಬಿದ್ದಿಲ್ಲ. ಇಂಗ್ಲೀಷಿನಲ್ಲಿ ಇದರ ಬಗ್ಗೆ ವಿಪುಲವಾದ ಸಾಹಿತ್ಯ ಲಭ್ಯವಿದ್ದು, ಕನ್ನಡದಲ್ಲಿ ಲಭ್ಯತೆ ಇರಲಿ ಎಂಬ ದೃಷ್ಟಿಯಿಂದ ಈ ಪ್ರಯತ್ನ. ಅನೇಕರಿಗೆ ಆಂಗ್ಲ ಭಾಷೆ ಅರ್ಥವಾಗದೆ ಇರಬಹುದು ಹಾಗೂ ಕನ್ನಡದಲ್ಲಿ ಬರೆಯಲು ಕಷ್ಟವೆನಿಸಿದಾಗ ಈ ಚಿಕ್ಕ ಬರಹ ಅವರ ಸಹಾಯಕ್ಕೆ ಬರುವದರಲ್ಲಿ ಸಂಶಯವಿಲ್ಲ. ವೃತ್ತಿ ನಿರತರಿಗೂ ಮಾನವ ಸಂಪನ್ಮೂಲ, ಕಾನೂನು ರಂಗದವರಿಗೆ, ವಿದ್ಯಾರ್ಥಿಗಳಿಗೆ, ಆಡಳಿತಗಾರರಿಗೆ, ಸಂಘದ ಸದಸ್ಯರುಗಳಿಗೆ ಹಾಗೂ ಈ ದಿಶೆಯ ವೃತ್ತಿಯಲ್ಲಿ ತೊಡಗಿದವರಿಗೆ ಇದೊಂದು ಸಹಾಯಕ ಹಾಗೂ ಪೂರಕ ಸಾಹಿತ್ಯ. ನನಗೂ ಈ ದಿಶೆಯಲ್ಲಿ ಅಲ್ಪ ಅನುಭವ ಹಾಗೂ ತಿಳುವಳಿಕೆ ಬಂದದ್ದರಿಂದ ಅದರ ಸಾರವನ್ನು ಇಲ್ಲಿ ಅಳವಡಿಸಿದ್ದೇನೆ. ಈ ಕೃತಿಯನ್ನು ಕಂಪ್ಯೂಟರಿಗೊಳಿಸಲು ಸಹಾಯ ನೀಡಿದ ನನ್ನ ಸಹಾಯಕ ಶರಣ್ ಕುಮಾರ್ ಅವರ ಶ್ರಮ ಅಪರಿಮಿತ. ಅಲ್ಪ ವೇಳೆಯಲ್ಲಿ ಕರಡು ಪ್ರತಿ ನೋಡಿ, ಸಲಹೆ ಸೂಚನೆ ನೀಡಿದ ನನ್ನ ಹಿರಿಯ ವೃತ್ತಿನಿರತ ಮಿತ್ರರಾದ ಶ್ರೀಯುತ ಎಸ್.ಎನ್. ಗೋಪಿನಾಥ್, ಗಂಗಾಧರಯ್ಯ, ಪುರುಷೋತ್ತಮ ಬದರಿಯವರ ಸಹಾಯ ಹಾಗೂ ಬೆಂಬಲ ನಾನು ಸ್ಮರಿಸಲೇಬೇಕು ಹಾಗೂ ಈ ಕೃತಿಯ ಮೆರುಗನ್ನು ಹೆಚ್ಚಿಸಲು ಲೇಖನಗಳನ್ನು ನೀಡಿದ ಮಹನೀಯರಿಗೆ ಧನ್ಯವಾದಗಳು. ಅಲ್ಲದೇ ಈ ಕೃತಿ ಹೊರತರಲು ಸಹಾಯ ನೀಡಿದ ನನ್ನ ಇತರ ಎಲ್ಲಾ ಮಿತ್ರರಿಗೂ ಅಭಾರಿ. ಈ ಕೃತಿಯ ಬಿಡುಗಡೆ ಮಾಡಿದ ಶ್ರೀಯುತ ಬಿ.ಸಿ. ಪ್ರಭಾಕರ್, ಅಧ್ಯಕ್ಷರು, ಶ್ರೀ ಡಿ.ಆರ್. ನಾಗರಾಜ್, ಉಪಾಧ್ಯಕ್ಷರು ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಇವರಿಗೆ ನನ್ನ ಕೃತಜ್ಞತೆಗಳು. ಓದುಗರು ಇದನ್ನು ಓದಿ ತಮ್ಮ ಅಭಿಪ್ರಾಯ ತಿಳಿಸಿದಲ್ಲಿ ಸಹಾಯವಾಗುವದು. ಇದರಲ್ಲಿಯ ತಪ್ಪು ಒಪ್ಪುಗಳನ್ನು ಸ್ವೀಕರಿಸಿ, ಮನ್ನಿಸಿ ಈ ಕನ್ನಡ ಕೃತಿ ಪ್ರೋತ್ಸಾಹಿಸುವ ಎಲ್ಲರಿಗೂ ಅನಂತ ನಮನಗಳು. ರಾಮ್ ಕೆ. ನವರತ್ನ ಪರಿವಿಡಿ 1. ಪೀಠಿಕೆ
2. ದುರ್ನಡತೆ 3. ಕೈಗಾರಿಕಾ ನಿಯೋಜನ (ಸ್ಥಾಯಿ ಆಜ್ಞೆಗಳು) ಕಾಯಿದೆ 1946 4. ಸಾಮಾಜಿಕ ನ್ಯಾಯದ ತತ್ವಗಳು 5. ಶಿಸ್ತುಕ್ರಮದ ವಿಧಾನಗಳು ಮೊದಲನೇ ಹಂತ 6. ಎರಡನೇ ಹಂತ ವಿವರಣೆಯ ಪರಿಗಣನೆ 7. ಮೂರನೇ ಹಂತ ವಿಚಾರಣೆ ನಡೆಸುವ ಬಗ್ಗೆ ಸೂಚನೆ 8. ನಾಲ್ಕನೇ ಹಂತ ವಿಚಾರಣೆಯನ್ನು ನಡೆಸುವುದು 9. ಐದನೇ ಹಂತ ವಿಚಾರಣೆಯಿಂದ ಹೊರಹೊಮ್ಮಿದ ಅಂಶಗಳ ದಾಖಲೆ 10. ಆರನೇ ಹಂತ ಸಂಬಂಧಿಸಿದ ಯೋಗ್ಯ ಅಧಿಕಾರಿಯಿಂದ ವಿಚಾರಣಾಧಿಕಾರಿಯ ವರದಿ ಮತ್ತು ನಿರ್ಣಯಗಳ ಗಣನೆ 11. ಹಂತ-7 ಶಿಕ್ಷೆಯ ನಿರ್ಧಾರವನ್ನು ಆಪಾದಿತನಿಗೆ ಬರವಣಿಗೆಯಲ್ಲಿ ತಿಳಿಸುವುದು 12. ಮುಕ್ತ ಅನುಮತಿ 13. ಸಂರಕ್ಷಿತ ಕಾರ್ಮಿಕ 14. ದಂಡನೆಯ ಪ್ರಕಾರಗಳು 15. Probationer ವಿಷಯ 16. ಕಾರ್ಖಾನೆಯ ಒಳಗಡೆ ಅಶಿಸ್ತಿನ ವರ್ತನೆ ಎಸಗಿದ ದುರ್ನಡತೆ 17. ಪ್ರಾಧಿಕಾರದ ಪ್ರವೇಶ 18. ಮೇಲ್ಮನವಿ 19. Epilogue (ತಾತ್ಪರ್ಯ) 20. ಅಡಕಗಳು 1. ಸಂಬಂಧಿಸಿದ ಪಾತ್ರಗಳು - ಏನು ಮಾಡಬೇಕು ಮತ್ತು ಮಾಡಬಾರದು
2. ವಿಚಾರಣಾ ವರದಿ ಮತ್ತು ತನಿಖಾ ನಿರ್ಣಯ - ಮಾದರಿ 3. Question and Answer on Domestic Enquiry ಭಾಗ - 2 - ಅಂತರಿಕ ವಿಚಾರಣೆ - ಲೇಖನಗಳು
0 Comments
Your comment will be posted after it is approved.
Leave a Reply. |
Categories
All
30,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |