|
ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದ ಮೆಟ್ಟಿಲುಗಳ ಮೇಲಿಂದ ಒಬ್ಬರು ಕಾಲು ಜಾರಿ ಬಿದ್ದರು. ಅದನ್ನು ಗಮನಿಸಿದಾಗ ಕ್ರೀಡಾಂಗಣದ ಮೆಟ್ಟಿಲುಗಳ ತುದಿಯಲ್ಲಿ ಯಾವುದೇ ರೀತಿಯಾದ ಆಧಾರಕ್ಕಾಗಿ ಗ್ರಿಲ್ ಅಥವಾ ತಡೆಗೋಡೆಯನ್ನು ನಿರ್ಮಿಸಿರುವುದು ಕಂಡು ಬರಲಿಲ್ಲ. ಮೆಟ್ಟಿಲು ಮತ್ತು ನೆಲಕ್ಕೆ ಸುಮಾರು 10-15 ಅಡಿ ಅಂತರವಿದೆ. ಇದು ಯಾವ ರೀತಿಯ ವಿನ್ಯಾಸ? ಏತಕೆ ಮೆಟ್ಟಿಲುಗಳಿಗೆ ತಡೆಗೋಡೆಯನ್ನು ನಿರ್ಮಿಸಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಆದರೆ ಇಲ್ಲಿ ದಿನನಿತ್ಯ ಓಡಾಡುವವರ ಸಂಖ್ಯೆ ಸಾಕಷ್ಟಿದೆ, ಅದರಲ್ಲಿ, ಮಕ್ಕಳು, ವಯಸ್ಕರು, ವಿದ್ಯಾರ್ಥಿಗಳು, ಎಲ್ಲರೂ ಇದ್ದಾರೆ. ಎಲ್ಲರಿಗೂ ಇದರಿಂದ ತೊಂದರೆಯಾಗುತ್ತಿದೆ. ಮೆಟ್ಟಿಲುಗಳಲ್ಲಿ ಕುಳಿತುಕೊಳ್ಳಲು ಭಯ ಪಡುವಂತಾಗಿದೆ. ತಮ್ಮಲ್ಲಿ ನನ್ನದೊಂದು ವಿನಂತಿಯೇನೆಂದರೆ, ಬೆಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯವರು ಇದನ್ನು ಗಮನಿಸಿ ಆದಷ್ಟು ಬೇಗ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲಿ ಎಂದು ಭಾವಿಸಿದ್ದೇನೆ.
0 Comments
Your comment will be posted after it is approved.
Leave a Reply. |
Categories
All
HR BooksSocial Work Books |
||||||
RSS Feed