K.VittalaRao. B.Sc. B.L. DSSA Management Consultant. Any Business segment is surrounded by plethora of Legislations – Company Law, Taxation, Duties, Employment & Separations, Social Security, and Environment and so on. Adherence to the Laws is the fundamental duty of any Business Corporate –being a Corporate Citizen asotherwise the existence itself would be at stake. Corporates, have evolved strategies towards accomplishments of BusinessExcellence, through their Vision, MissionStatements & Objectives . The vision or the mission speaks of the commitment of a Corporate towards being ethical; respect Law of the Land,
1 Comment
PREFACE
Competency based human resource (HR) management practices make positive impact. That is why most of the reputed organizations in India and abroad have introduced it. Even though competency based HR has a history of nearly thirty years, it continues to be a confused subject even today for want of proper books. In recent times many of our Business Schools have introduced competency mapping as a specialised subject but teachers and students are finding it difficult to get a good book to study. Dearth of good books in this subject is not the case in India alone but in the entire Asia Pacific region. Another subject in HR which is very important but does not have good books is Personal Growth and Interpersonal Effectiveness. Considering these needs of HR profession in mind I have written this book by utilising my professional and academic experience. ದ್ವಿತೀಯ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನವು ಬೆಂಗಳೂರಿನಲ್ಲಿ ಯಶಸ್ವಿಯಾಗಿ ನೆರವೇರಿತು. ಈ ಸಮ್ಮೇಳನವನ್ನು ಕರ್ನಾಟಕ ಮಾಲೀಕರ ಸಂಘ, ಎನ್‍ಐಪಿಎಂ – ಕರ್ನಾಟಕ ಚಾಪ್ಟರ್, ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗ, ಕರ್ನಾಟಕ ವೃತ್ತಿನಿರತರ ಸಮಾಜಕಾರ್ಯಕರ್ತರ ಸಂಘ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಈ ಕನ್ನಡ ಸಮ್ಮೇಳನದಲ್ಲಿ ಸುಮಾರು 400 ಜನ ಮಾನವ ಸಂಪನ್ಮೂಲ ವೃತ್ತಿಪರರು ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಬಿ.ಸಿ. ಪ್ರಭಾಕರ್, ಕರ್ನಾಟಕ ಮಾಲೀಕರ ಸಂಘ ಮತ್ತು ವಕೀಲರು-ಬಿ.ಸಿ.ಪಿ. ಅಸೋಸಿಯೇಟ್ಸ್, ಮುಖ್ಯ ಅತಿಥಿಗಳಾಗಿ ಡಾ. ಗುರುರಾಜ ಕರಜಗಿ, ಅಧ್ಯಕ್ಷರು - ಕ್ರಿಯೇಟಿವ್ ಅಕಾಡೆಮಿ ಮತ್ತು ಅತಿಥಿಗಳಾಗಿ ಶ್ರೀ ಹನುಮಂತರಾಯಪ್ಪರವರು, ಸಂಸ್ಥಾಪಕ ಸದಸ್ಯರು, ನಿರಾತಂಕ ಮತ್ತು ಮಾಜಿ ಅಧ್ಯಕ್ಷರು - ಬಿಎಂಐಸಿಎಪಿಎ ಭಾಗವಹಿಸಿದ್ದರು.
ಮಾನವರ ವರ್ತನೆಯು ತುಂಬ ವಿಶೇಷ ಮತ್ತು ಸಂಕೀರ್ಣ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವ ಮತ್ತು ವರ್ತನೆಗಳನ್ನು ಹೊಂದಿರುತ್ತಾರೆ. ಈ ವಿಶೇಷತೆಗೆ ಮತ್ತು ವಿಭಿನ್ನತೆಗೆ ಅವರು ಇರುವ ಸಮಾಜದ ಪರಿಸ್ಥಿತಿಗಳು, ತಮ್ಮ ಜೀವನದಲ್ಲಿ ಆದ ಬದಲಾವಣೆಗಳು, ಅವರ ಮೇಲೆ ಆದ ಪ್ರಭಾವಗಳು, ಅವರು ಮಾಡಿಕೊಂಡ ಸಹವಾಸಗಳು, ಅಭ್ಯಾಸಗಳು ಇನ್ನೂ ಅನೇಕ ಅಂಶಗಳು ಕಾರಣವಾಗುತ್ತವೆ. ಈ ವಿಶೇಷತೆಯೊಂದಿಗೆ ಉದ್ಯಮಗಳು ತಮಗೆ ಬೇಕಾದ ಮಾನವ ಸಂಪತ್ತನ್ನು ಸಮಾಜದಿಂದ ತೆಗೆದುಕೊಳ್ಳುತ್ತವೆ. ಉದ್ಯಮಗಳು ಈ ಮಾನವ ಸಂಪತ್ತನ್ನು ತಮ್ಮ ಉದ್ದೇಶಗಳ ಸಾಧನೆಗಾಗಿ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು ಮತ್ತು ಸತತವಾಗಿ ಅವರನ್ನು ಹೆಚ್ಚಿನ ಸವಾಲುಗಳನ್ನು ಎದುರಿಸಲು ತಯಾರು ಮಾಡುತ್ತಿರಬೇಕು. ಅಲ್ಲದೆ ಹೆಚ್ಚಿನ ಕಾಲ ಒಟ್ಟಿಗೆ ಕೆಲಸ ಮಾಡಲು ಹಾಗು ಸಹಭಾಗಿತ್ವವನ್ನು ತರಲು ಅವರಲ್ಲಿ ಉತ್ಸಾಹ ತುಂಬಿ ಅಗತ್ಯ ಪಕ್ವತೆಯನ್ನು (maturity) ಬೆಳಸಬೇಕು. ಅಗತ್ಯ ಶಿಕ್ಷಣ, ತರಬೇತಿ ಮತ್ತು ಲವಲವಿಕೆ (engagement) ಮತ್ತಿತರ ಯೋಜಿತ ಕಾರ್ಯಕ್ರಮಗಳ ಮುಖಾಂತರ ಕಾರ್ಮಿಕರ ಅಭಿವೃದ್ದಿಗೆ ಶ್ರಮಿಸುವುದು ಯಾವಾಗಲೂ ಸಂಸ್ಥೆಯ/ಉದ್ಯಮದ ಜವಾಬ್ಧಾರಿಯಾಗುತ್ತದೆ. ಹಾಗೆಯೇ ಕಾರ್ಮಿಕರೊಂದಿಗೆ ವ್ಯವಹರಿಸುವಾಗ ನ್ಯಾಯೋಚಿತವಾಗಿ ನಡೆದುಕೊಳ್ಳಬೇಕು. ಯಾವಾಗ ಸಂಸ್ಥೆ ತನ್ನ ಜವಾಬ್ಧಾರಿಗಳನ್ನು ಸಮರ್ಥವಾಗಿ ನಿರ್ವಹಿಸಲು ವಿಫಲಗೊಳ್ಳುತ್ತದೆಯೋ ಆಗ ಕಾರ್ಮಿಕ ಅಶಾಂತಿ, ವಿವಾದಗಳು ಮತ್ತು ಸಂಘರ್ಷಗಳು ಉದ್ಬವವಾಗುತ್ತವೆ. ಹಾಗೆಂದಾಕ್ಷಣ, ಕಾರ್ಮಿಕರಿಗೆ ಯಾವುದೇ ಜವಾಬ್ದಾರಿಗಳು ಇಲ್ಲವೆಂದರ್ಥವಲ್ಲ ಮತ್ತು ಅವರು ತಪ್ಪುಗಳನ್ನು ಮಾಡುವುದಿಲ್ಲ ಎಂದರ್ಥವಲ್ಲ. ಅವರಿಗೂ ತಮ್ಮದೇ ಆದ ಜವಬ್ದಾರಿಗಳಿವೆ ಮತ್ತು ಅವರ ಉದ್ದೇಶಪೂರ್ವಕ ಇಲ್ಲವೆ ನಿರುದ್ದೇಶ ಪೂರ್ವಕ ತಪ್ಪುಗಳು ತೀವ್ರ ಸಂಘರ್ಷಗಳಿಗೆ ಮತ್ತು ಅಡ್ಡ ಪರಿಣಾಮಗಳಿಗೆ ಕಾರಣಗಳಾಗಿವೆ. ಆದರೆ, ಗಮನಿಸಬೇಕಾದ ಒಂದು ವಿಚಾರವೆಂದರೆ ಕಾರ್ಮಿಕರನ್ನು ಸರಿಯಾಗಿ ಸಿದ್ದಪಡಿಸಿ ಅವರನ್ನು ಕಂಪನಿಯ ಉದ್ದೇಶಗಳ ಸಾಧನೆಗೆ ಉಪಯೋಗಿಸಿಕೊಳ್ಳಬೇಕಾದದ್ದು ಸಂಸ್ಥೆಯ ಪ್ರಾಥಮಿಕ ಜವಬ್ದಾರಿ. ಈ ಪ್ರಕ್ರಿಯೆಯಲ್ಲಿ ಕಾರ್ಮಿಕರ ಕೊಡುಗೆಗಳಿಗೆ ಅನುಸಾರವಾಗಿ ಅವರಿಗೆ ಮೌಲ್ಯ ವೃದ್ದಿ ಸೃಷ್ಟಿಸುವುದು ಉದ್ಯಮದ ಜವಾಬ್ದಾರಿಯಾಗುತ್ತದೆ. ಯಾವ ಕೆಲಸಗಳು, ಬೇಕು ಬೇಡಗಳು ಉತ್ತಮ ಕೈಗಾರಿಕಾ ವಾತಾವರಣವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಎಂಬುದನ್ನು ನಮ್ಮ ಅನುಭವ ನಮಗೆ ಕಲಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ, ಕೆಲವೊಂದು ಬೇಕು ಬೇಡಗಳು, ಕೈಗೊಳ್ಳಬಹುದಾದ ಯೋಜನೆಗಳು ಮತ್ತು ಎಚ್ಚರಿಕೆ ವಹಿಸಬೇಕಾದ ಕೆಲವು ಕ್ರಮಗಳನ್ನು ಈ ಕೆಳಗೆ ವಿವರಿಸಲು ಪ್ರಯತ್ನಿಸಲಾಗಿದೆ.
ನಿರಾತಂಕ ಸ್ವಯಂ ಸೇವಾ ಸಂಸ್ಥೆಯ ವತಿಯಿಂದ INOX ಚಿತ್ರಮಂದಿರದ 7 ಕಡೆಗಳಲ್ಲಿ POSH (The Sexual Harassment of Women at Workplace (Prevention, Prohibition and Redressal) Act, 2013 ) ಕುರಿತಂತೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟವರು ನಿರಾತಂಕ ತಂಡದ ಶ್ರೀಮತಿ ಶ್ರೀಲಕ್ಷ್ಮೀ, ಮಂಜುನಾಥ್ (MJ Management), ಗಂಗಾಧರ್, ನಾಗರಾಜ್ ನಾಯಕ್. ಹೆಚ್ಚಿನ ಮಾಹಿತಿಗಾಗಿ: http://www.niratanka.org/posh-committee.html ಜಾಗತೀಕರಣದ ಪ್ರಭಾವದಿಂದ ಮಾನವ ಸಂಪನ್ಮೂಲ ವಿಭಾಗದ ಉಗಮ ಎಂಬ ಅಭಿಪ್ರಾಯ ಇಂದು ಎಲ್ಲರಲ್ಲಿಯೂ ಮನೆಮಾತಾಗಿರುವುದು ಸತ್ಯವಾಗಿರುವುದಷ್ಟೇ ಅಲ್ಲದೇ ಈ ವಿಭಾಗವು ಹೊರ ರಾಷ್ಟ್ರಗಳು ಭಾರತಕ್ಕೆ ಮತ್ತು ಭಾರತದ ಕೈಗಾರಿಕಾ ಬೆಳವಣಿಗೆಗೆ, ನೀಡಿದ ಕೊಡುಗೆಯಾಗಿದೆ ಎಂಬುದು ಹಾಸ್ಯಾಸ್ಪದವೇ ಸರಿ. ಕಾರಣ ಈ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪರಿಕಲ್ಪನೆಗಳಾದ Organisational values, Diversity, Performance Management, Training and Development, People transformation, Problem solving, Communication etc., ಮುಂತಾದವುಗಳ ಉಲ್ಲೇಖ ಅಷ್ಟೇ ಅಲ್ಲದೆ ಈ ವಿಷಯಗಳಲ್ಲಿನ ಪರಿಪೂರ್ಣ ಪರಿಕಲ್ಪನೆಗಳನ್ನು ಸರಿಸುಮಾರು 1200 ವರ್ಷಗಳನ್ನು ಹಿಂದೆಯೇ ನಮ್ಮ ಕನ್ನಡ ಸಾಹಿತ್ಯದಲ್ಲಿ, ಅದರಲ್ಲಿಯೂ ವಚನ ಸಾಹಿತ್ಯ, ದಾಸ ಸಾಹಿತ್ಯ ಹಾಗೂ ಇತ್ತೀಚೆಗೆ ಬಂದಂತಹ ಡಿ.ವಿ.ಜಿ. ಯವರ ಕಗ್ಗದಂತಹ ಸಾಹಿತ್ಯ ಪ್ರಕಾರಗಳಲ್ಲಿ ಕಾಣಬಹುದಾಗಿದೆ.
ಈ ದೃಷ್ಟಿಯಿಂದ, ಮಾನವ ಸಂಪನ್ಮೂಲ ಪರಿಕಲ್ಪನೆಗಳನ್ನು, ಭಾರತ ಅನ್ಯ ರಾಷ್ಟ್ರಗಳಿಗೆ ಎರವಲಾಗಿ ನೀಡಿದೆ ಎಂಬುದು ಕಟು ಸತ್ಯವೇ ಹೊರತು, ಈ ಪರಿಕಲ್ಪನೆ ಹೊರ ರಾಷ್ಟ್ರದಿಂದ ನಮ್ಮ ರಾಷ್ಟ್ರಕ್ಕೆ ಬಂದ ವಿಚಾರವಲ್ಲ. ಈ ಕಟು ಸತ್ಯವನ್ನು ನಾವು ಅಂದರೆ, “So called HR Professionals”, ಜಗತ್ತಿಗೆ ಬಹಳ ಸ್ಪಷ್ಟವಾಗಿ ತಿಳಿಸದೇ ಹೋದಲ್ಲಿ ಹಾಗೂ ಮಾನವ ಸಂಪನ್ಮೂಲ ವಿಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಕನ್ನಡ ಸಾಹಿತ್ಯದ ವಿವಿಧ ಪ್ರಕರಗಳನ್ನು ಅಧ್ಯಯನ ಮಾಡದೇ ಹೋದಲ್ಲಿ ನಮಗೆ ನಾವೇ ದ್ರೋಹ ಬಗೆದುಕೊಂಡಂತಾಗುತ್ತದೆ. ಈ ದಿಶೆಯಲ್ಲಿ “ಕನ್ನಡ ಸಾಹಿತ್ಯ ಮತ್ತು ಆಧುನಿಕ ಮಾನವ ಸಂಪನ್ಮೂಲ ವಿಭಾಗದ ಸಂಪೂರ್ಣ ಅಭ್ಯುದಯ, ಒಂದು ತುಲನಾತ್ಮಕ ಅಧ್ಯಯನ”ದ ಅವಶ್ಯಕತೆ ಬಹಳವಿದ್ದು, ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕಾಗಿದೆ. ನಾಗಭೂಷಣ್ Dy. General Manager - HR & IR, SEG Automotive (BOSCH Ltd.,) ಈಗಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ, ಸಂಬಂಧಗಳು ಇಂಟರ್‍ನೆಟ್ ನ ಸ್ಪೀಡ್ ಗೆ ಒಳಗಾಗಿ, ಭಾವನೆಗಳು ಮತ್ತು ಮೌಲ್ಯಗಳು ನಶಿಸುತ್ತಿರುವುದು ವಿಷಾದನೀಯ. ಇಂತಹ ದುಸ್ಥಿತಿಯಲ್ಲಿನ ನಾವು ಸಂಬಂಧಗಳ ಕಾಪಾಡಿ, ಸಮಾಜ ಕಟ್ಟಬೇಕಾಗಿದೆ. ಈ ನಿಟ್ಟಿನಲ್ಲಿ ಸಮಾಜಕಾರ್ಯಕರ್ತರ ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳ ಪಾತ್ರ ಗಣನೀಯ. ಇದಕ್ಕೆ ಪೂರಕವಾಗಿ, ನಮ್ಮೆಲ್ಲರ ಮನಗಳಿಗೆ ಸಂಬಂಧಗಳ ಮಹತ್ವ ತಿಳಿಸುವ ಚಿತ್ರ ಮರಳಿ ಮನೆಗೆ. ಈ ಚಿತ್ರದ ವೀಕ್ಷಣೆಯನ್ನು ದಿನಾಂಕ: (ಅತಿ ಶೀಘ್ರದಲ್ಲೇ), NMS ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಚಿತ್ರದ ವೀಕ್ಷಣೆಯ ನಂತರ, ನಿರ್ದೇಶಕರಾದ ಶ್ರೀ ಯೋಗೇಶ್ ಮಾಸ್ಟರ್ ರವರೊಂದಿಗೆ ಸಂವಾದವಿರುತ್ತದೆ. ಈವೊಂದು ಕಾರ್ಯಕ್ರಮದಲ್ಲಿ, ತಾವುಗಳು ಭಾಗಿಯಾಗಿ ಸಂಬಂಧಗಳ ಉಳಿಸಿ, ಬೆಳೆಸಲು ಸಹಕಾರ ಮಾಡಬೇಕಾಗಿ ವಿನಮ್ರ ವಿನಂತಿ. ಈ ಚಲನಚಿತ್ರ ನೋಡಲು ಆಸಕ್ತಿ ಇರುವವರು ಮೊದಲೇ ತಮ್ಮ ಹೆಸರು ಹಾಗೂ ಮಾಹಿತಿಯೊಂದಿಗೆ ನೋಂದಾಯಿಸಿಕೊಳ್ಳಬೇಕು. ಕೆ. ವಿಠ್ಠಲ್ ರಾವ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಅಂಡ್ ಲೀಗಲ್ ಅಡ್ವೈಸರ್ ಶ್ರೀ ಖಾಡಿಲ್ಕರ್, ಎಲ್ಲರಿಗೂ ನಮಸ್ಥಾರ. ಸಂಸ್ಥೆಯು ತೆಗೆದುಕೊಳ್ಳಲು ನಿರ್ಧಸಿರುವ ಒಂದು ಪ್ರಮುಖ ಯೋಜನೆಯ ಬಗ್ಗೆ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾನು ಹರ್ಷಿಸುತ್ತೇನೆ. ನಿಮಗೆಲ್ಲಾ ತಿಳಿದಿರುವಂತೆ ಜರ್ಮನಿಯ ನನ್ನ ಹಿಂದಿನ ಭೇಟಿಯ ಸಂದರ್ಭದಲ್ಲಿ, ಏರ್‍ಕ್ರಾಫ್ಟ್‍ನ ಟ್ರಾನ್ಸ್‍ಮಿಷನ್ ಬಿಡಿಭಾಗಗಳನ್ನು ಉತ್ಪಾದಿಸಲು ಮತ್ತು ಸರಬರಾಜು ಮಾಡುವ ಬಗ್ಗೆ ಬೆಕ್ಸ್ಟೀರ್ನೊಂದಿಗೆ ಒಂದು ಕರಾರಿಗೆ ಸಹಿ ಮಾಡಿರುತ್ತೇನೆ. ಆ ಬಿಡಿಭಾಗವು ನವೀನ ತಾಂತ್ರಿಕತೆಯೊಂದಿಗೆ ಅತ್ಯಂತ ಕ್ಲಿಷ್ಟಕರವಾದದ್ದಾಗಿರುತ್ತದೆ. ನಮ್ಮ ಸಂಸ್ಥೆಯು ಅಂತಹ ಬಿಡಿಭಾಗವನ್ನು ಉತ್ಪಾದಿಸಿ ರಫ್ತು ಮಾಡುವ ಮೊದಲನೇ ಸಂಸ್ಥೆಯಾಗಿರುತ್ತದೆ. ಅಂದಾಜಿನ ಪ್ರಕಾರ, ನಮಗೆ ಬೇಡಿಕೆ ಆದೇಶ ಬಂದಲ್ಲಿ, ನಮ್ಮ ಉತ್ಪಾದನಾ ಸಾಮರ್ಥ್ಯದ ಬಳಕೆಯು ಶೇಕಡ 85ರಷ್ಟಕ್ಕೆ ತಲುಪಬಹುದು ಮತ್ತು ಲಾಭಾಂಶವೂ ಸಹ ಉತ್ತಮವಾಗಿರುತ್ತದೆ.
ಜಿ.ಪಿ.ನಾಯಕ್ ಪ್ರಧಾನ ಸಲಹೆಗಾರರು, ಟ್ಯಾಲೆಂಟ್ ಅವಿನ್ಯೂಸ್. ಮಾನವ ಸಂಪನ್ಮೂಲ ನಿರ್ವಹಣೆಯು (ಮಾ.ಸಂ.ನಿ.) ಸಮಕಾಲೀನ ಕೈಗಾರಿಕೆ ಮತ್ತು ಇತರೆ ಸಂಸ್ಥೆಗಳಲ್ಲಿನ ಆಡಳಿತ ವ್ಯವಸ್ಥೆಯ ಮುಖ್ಯ ಅಂಗವಾಗಿದೆ. ಏಕೆಂದರೆ ಯಾವುದೇ ಕೈಗಾರಿಕೆ ಅಥವಾ ಸಂಸ್ಥೆಯ ಉಳಿವು-ಅಳಿವು ಅದರ ಮಾನವ ಸಂಪನ್ಮೂಲ ನಿರ್ವಹಣೆಯ ದಕ್ಷತೆಯನ್ನು ಅವಲಂಬಿಸಿರುತ್ತದೆ. ಕಾರ್ಖಾನೆ, ವಾಣಿಜ್ಯ ಸಂಸ್ಥೆ ಹಾಗೂ ಇತರೆ ಸಂಘಸಂಸ್ಥೆಗಳಲ್ಲಿ, ಜನರನ್ನು ನೌಕರಿಗಾಗಿ ನೇಮಕ ಮಾಡುವುದು, ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಲು ಅವರಿಗೆ ತರಬೇತಿ ನೀಡುವುದು, ಅವರು ಮಾಡುವ ಕೆಲಸಕ್ಕೆ ಸೂಕ್ತ ಸಂಬಳ ಮತ್ತು ಭತ್ಯೆಯನ್ನು ನೀಡುವುದು, ಮಾಲೀಕ ಮತ್ತು ಕಾರ್ಮಿಕರ ನಡುವೆ ಕಲಹ ರಹಿತ ಸಂಬಂಧವನ್ನು ಬೆಳೆಸುವುದು, ಕಾರ್ಮಿಕ ಕಾಯಿದೆಗಳನ್ನು ಪಾಲಿಸುವುದು, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಪೂರೈಸಲು ನೌಕರರ ಮನವೊಲಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾನವ ಸಂಪನ್ಮೂಲ ನಿರ್ವಹಣೆ ಎಂದು ಹೇಳಲಾಗುತ್ತದೆ.
ನವೀನ್ ನಾಯ್ಕ್ ಆಫೀಸರ್, ಮಾನವ ಸಂಪನ್ಮೂಲ ವಿಭಾಗ, ಎಸ್ಸಿಲಾರ್ ಮ್ಯಾನುಫ್ಯಾಕ್ಚರಿಂಗ್ ಇಂಡಿಯಾ ಪ್ರೈ.ಲಿ., ಬೆಂಗಳೂರು. ಪೀಠಿಕೆ
ಭಾಷೆ ಎಂಬುದು ಅನಾದಿ ಕಾಲದಿಂದಲೂ ಸಂವಹನದ ಒಂದು ಮುಖ್ಯ ಭಾಗವಾಗಿ ಮಾನವನ ಎಲ್ಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಪೂರಕ ಸಾಧನವಾಗಿ ಕಾರ್ಯನಿರ್ವಹಿಸುತ್ತಿದೆ. ಬಹುಶಃ ಭಾಷೆ ಎಂಬುದೇ ಒಂದು ಸಾಧನವಾಗಿ ಮಾನವ ಮತ್ತು ಮೃಗಗಳನ್ನು ಬೇರ್ಪಡಿಸಿದೆ ಎಂದರೆ ತಪ್ಪಲ್ಲ. ಜಗತ್ತಿನ ಸಾವಿರಾರು ಭಾಷೆಗಳಿಗೆ ಹೇಳಿಕೊಳ್ಳುವಷ್ಟು ಇತಿಹಾಸ ಮತ್ತು ಅವಿತವ್ಯ ಪರಂಪರೆಯ ಬೆಂಬಲವಿದೆ. ಭಾಷೆ ಕೇವಲ ಶಬ್ದಗಳ ಆಡಂಬರವಾಗದೆ ಜನರ ಜೀವನಾಡಿಯಲ್ಲಿ ಬೆರೆತು ಹೋಗಿರುತ್ತದೆ. ಸಂಸ್ಕೃತಿಯ ಕೈಪಿಡಿಯಾಗಿ, ಆಚಾರ-ವಿಚಾರಗಳ ಬೆನ್ನೆಲುಬಾಗಿ, ವೃತ್ತಿಧರ್ಮಕ್ಕೆ ಆಸರೆಯಾಗಿ, ಸಂವಹನ ಕಲೆಯನ್ನು ಪೋಷಿಸುತ್ತಾ ಊರಿಂದ ಊರಿಗೆ ನಾಲಗೆಯ ಮೇಲೆ ಹರಿದಾಡಿ ತನ್ನ ತುಂಬು ತೋಳುಗಳಿಂದ ಜನರನ್ನು ಸೆಳೆದಪ್ಪಿಕೊಂಡ ಪರಿಯೇ ಅದ್ಭುತವಾದದ್ದು, ಭಾಷೆಯ ಬೆಂಬಲವಿಲ್ಲದೆ ಇದ್ದರೆ ಮಾನವನ ಬಾಯಿಂದ ಹೊರಟ ರೋದನೆಗಳೆಲ್ಲ ಚೀರಾಟಗಳಾಗಿರುತ್ತಿತ್ತು. ಅಕ್ಷರ ಜೋಡಣೆಗಳಿಲ್ಲದೆ ಅನುಭವಗಳು ಅರ್ಥ ಕಳೆದುಕೊಳ್ಳುತ್ತಿದ್ದವು. |
Categories
All
20,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |